ಸೋಮವಾರಪೇಟೆ, ಜೂ. 17: ರೋಟರಿ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ ತಾ. 21 ರಂದು ನಡೆಯಲಿದೆ ಎಂದು ಅಧ್ಯಕ್ಷ ಮೋಹನ್ ರಾಮ್ ತಿಳಿಸಿದ್ದಾರೆ.
ಇಲ್ಲಿನ ಮಾನಸ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ತರಬೇತುದಾರ ಡಾ. ರವಿ ಅಪ್ಪಾಜಿ ಅವರು 2016-17ನೇ ಸಾಲಿನ ಅಧ್ಯಕ್ಷ ಭರತ್ ಭೀಮಯ್ಯ ಹಾಗೂ ಕಾರ್ಯದರ್ಶಿ ವನಮಾಲಿ ಹೆಬ್ಬಾರ್ ಅವರಿಗೆ ಪದಗ್ರಹಣ ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ಸಹಾಯಕ ಗವರ್ನರ್ ಜವರೇಗೌಡ, ಡಾ. ಸಿ.ಆರ್. ಪ್ರಶಾಂತ್, ಡಿ.ಎಂ. ಕಿರಣ್, ಮಹೇಶ್ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.