ಮಡಿಕೇರಿ, ಮೇ 17: ಕೊಡವರ ಹೃದಯದಲ್ಲಿ ಸ್ಥಾನ ಪಡೆದಿರುವ ದೇವಟ್ ಪರಂಬು ಸ್ಮಾರಕವನ್ನು ನಿರ್ಮಿಸಲು ರಾಜ್ಯ ಹಾಗೂ ಕೇಂದ್ರ ಸರಕಾರ ಮುಂದಾಗಬೇಕು ಎಂದು ರಾಜ್ಯ ಸರಕಾರಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ. ದೇವಟ್ ಪರಂಬುವಿನಲ್ಲಿ ಟಿಪ್ಪು ಕೊಡವರನ್ನು ಹತ್ಯೆ ಮಾಡಿದ ಕುರಿತು ಪ್ರತಿ ಮಗುವಿಗೂ ಹೇಳಲ್ಪಟ್ಟಿದೆ. ಭಾಗಮಂಡಲ-ತಲಕಾವೇರಿಯ ಭೇಟಿ ದೇವಟ್ ಪರಂಬುವಿಗೆ ತೆರಳಿ ಹೂವು-ಎಲೆ ಅರ್ಪಿಸಿ ಅಗಲಿದ ಹಿರಿಯರಿಗೆ ಗೌರವ ಅರ್ಪಿಸದಿದ್ದರೆ ಅಪೂರ್ಣ. ಹಿರಿಯರನ್ನು ಆರಾಧಿಸುವ ಕೊಡವರಿಗೆ ದೇವಟ್ ಪರಂಬು ಪವಿತ್ರ ಸ್ಥಳ.

ಸಂವಿಧಾನ ಪ್ರತಿ ವ್ಯಕ್ತಿ, ಸಮುದಾಯಕ್ಕೆ ಗೌರವಯುತ ಸ್ಥಾನ ಒದಗಿಸುತ್ತಿದ್ದು, ಕೊಡವರಿಗೂ ಆದ್ಯತೆ ನೀಡಿ ಸೂಕ್ತವಾದ ಸ್ಮಾರಕ ನಿರ್ಮಿಸ ಬೇಕೆಂದು ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.