ಗುಡ್ಡೆಹೊಸುರು, ಜೂ. 21: ಇಲ್ಲಿಗೆ ಸನಿಹದ ನಂಜರಾಯಪಟ್ಟಣದಲ್ಲಿ ಅಲ್ಲಿನ ಗೌಡಯುವಕ ಸಂಘದ ವತಿಯಿಂದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಗಿಡಗಳನ್ನು ನೆಡುವದರೊಂದಿಗೆ ವಿಶ್ವಪರಿಸರ ದಿನವನ್ನು ಆಚರಿಸಲಾಯಿತು.
ವೇದಿಕೆಯಲ್ಲಿ ತಾ.ಪಂ. ಸದಸ್ಯ ವಿಜು ಚಂಗಪ್ಪ, ಗ್ರಾ.ಪಂ. ಅಧ್ಯಕ್ಷೆ ಶಭಿನಭಾನು, ವನಪಾಲಕರಾದ ದೇವಿಪ್ರಸಾದ್, ಗೌಡಸಮಾಜದ ಅಧ್ಯಕ್ಷ ಕೆದಂಬಾಡಿ ಚೇತನ್, ಗೌಡಯುವ ಸಂಘದ ಅಧ್ಯಕ್ಷ ನಡುಮನೆ ಚಿಂತು, ಜಿ.ಕೆ.ವಿ.ಕೆ. ನಿವೃತ್ತ ಅಧಿಕಾರಿ ಕೆದಂಬಾಡಿ ಸೋಮಣ್ಣ ಹಾಜರಿದ್ದು ದಿನದ ಮಹತ್ವ ಹಾಗೂ ಪರಿಸರವನ್ನು ಜನಸಾಮಾನ್ಯರು ಯಾವ ರೀತಿಯಲ್ಲಿ ಕಾಪಾಡ ಬಹುದು ಎಂಬ ವಿಚಾರಗಳನ್ನು ವಿಚಾರ ಮಂಡಿಸಿದರು.
ನಿವೃತ್ತ ಶಿಕ್ಷಕ ಮೂಟೆಮನೆ ನಂಜುಂಡ ಸ್ವಾಗತಿಸಿದರು. ಸಂಘದ ಸದಸ್ಯ ವಿಜು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಗೌಡಯುವಕ ಸಂಘದ ಕಾರ್ಯದರ್ಶಿ ಕೇಕಡ ಮಧು, ಸದಸ್ಯರು ಮತ್ತು ಸಾರ್ವಜನಿಕರು ಹಾಜರಿದ್ದರು.