ಮಡಿಕೇರಿ, ಜೂ. 17: ಕೊಡ್ಲಿಪೇಟೆಯ ಹೇಮಾವತಿ ನದಿ ಪಾತ್ರದಲ್ಲಿ ಕೆಲವು ಅಕ್ರಮಿಗಳು ಸಂಗ್ರಹಿಸಿಟ್ಟಿದ್ದ 30 ಲೋಡ್‍ಗಳಷ್ಟು ಮರಳನ್ನು ಇಂದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಂಟಿ ಧಾಳಿ ನಡೆಸಿದ ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳನ್ನು ಶೇಖರಿಸಿ ಸಾಗಾಟಕ್ಕೆ ತಯಾರಿ ನಡೆಸಿದ್ದ ಮರಳನ್ನು ವಶಪಡಿಕೊಂಡಿರುವದಾಗಿ ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖಾಧಿಕಾರಿ ಮಹೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಸಂಬಂಧ ಆರೋಪಿಗಳು ನಾಪತ್ತೆಯಾಗಿದ್ದು, ತನಿಖೆ ಮುಂದುವರೆಸಿರುವದಾಗಿ ತಿಳಿಸಿದ್ದಾರೆ.