ಕುಶಾಲನಗರ, ಜೂ. 17: ಕುಶಾಲನಗರದ ಪೃಥ್ವಿ ಜುವೆಲ್ಲರ್ಸ್‍ನಲ್ಲಿ ನೂತನವಾಗಿ ಆರಂಭಿಸಲಾದ ವಜ್ರಾಭರಣ ವಿಭಾಗದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೂತನ ವಜ್ರಾಭರಣ ಘಟಕದ ಉದ್ಘಾಟನೆ ನೆರವೇರಿಸಿದರು. ಪೃಥ್ವಿ ಜುವೆಲ್ಲರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಪಾರಸ್ ಮಾಲ್ ದಕ್, ಪ್ರಮುಖರಾದ ಸುರೇಶ್ ಲಾಲ್ ದಕ್, ಸಮ್ರತ್ ಲಾಲ್ ದಕ್, ಪದಮ್ ದಕ್, ಕಿಸ್ನ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಮಹೇಶ್, ಕುಶಾಲನಗರ ಘಟಕದ ವ್ಯವಸ್ಥಾಪಕ ನಾಗರಾಜ್ ಹಾಗೂ ಪ್ರಮುಖರು, ಸಿಬ್ಬಂದಿಗಳು ಇದ್ದರು.