ಶನಿವಾರಸಂತೆ, ಮೆ 14: ಶನಿವಾರಸಂತೆ ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯತಿ ಅಧ್ಯಕ್ಷೆ ಕೆ. ಎನ್. ನಿರ್ಮಲ ಸುಂದರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಬ್ಯಾಡಗೊಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ಕೊರೆಸಲು ಪಂಚಾಯಿತಿಯ ಅನುಮತಿ ಪಡೆಯಬೇಕು ಎಂದು ನಿರ್ಣಯಿಸಲಾಯಿತು. ಪಂಚಾಯಿತಿಯ 14 ನೇ ಹಣಕಾಸು ನಿಧಿಯಲ್ಲಿ ಇನ್ನೂ ಅನುದಾನ ಬಿಡುಗಡೆಯಾಗದಿರುವದರಿಂದ ಕಾಮಗಾರಿಗಳು ಸ್ಥಗಿತ ಗೊಂಡಿವೆ. 2015-16 ನೇ ಸಾಲಿನಲ್ಲಿ ಕೇವಲ ರೂ. 3,50,000 (ಮೂರು ಲಕ್ಷದ ಐವತ್ತು ಸಾವಿರ) ಮಾತ್ರ ಬಿಡುಗಡೆಯಾಗಿದ್ದು ಅನುದಾನ ಕಡಿಮೆಯಾಗಿರುವದರಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದೆ ಎಂದು ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಸುಂದರ್ ಹೇಳಿದರು. ಬರಗಾಲದ ಹಿನೆÀ್ನಲೆಯಲ್ಲಿ ಕೆರೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಭಿವೃದ್ಧಿಗೊಳಿಸಲು ಸಭೆ ತಿರ್ಮಾನಿಸಿತು.
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಬಿ. ಎ. ಅಹಮ್ಮದ್ ಸದಸ್ಯರುಗಳಾದ ಬಿ. ಕೆ. ದಿನೇಶ್, ಕೇಶವ, ಷಣ್ಮುಖಯ್ಯ, ಎಸ್. ಎಂ. ರೇಣುಖಾ, ಹೇಮಾವತಿ, ಸಾವಿತ್ರಿ, ಗೌರಮ್ಮ ಇದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜಿ.ಎಲ್. ಧನಂಜಯ ವಂದಿಸಿದರು.