ಕುಶಾಲನಗರ, ಜೂ. 9: ಕುಶಾಲನಗರ ಸಮೀಪ ಹೆಬ್ಬಾಲೆ ಗ್ರಾಮದಲ್ಲಿ ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ. ಹೆಬ್ಬಾಲೆಯ ಮಿಲ್ ಸಮೀಪದ ನಿವಾಸಿ ವಿಜಯಕುಮಾರ್ ಅವರ ಮನೆಯ ಹಿಂಬಾಗಿಲು ಒಡೆದ ಕಳ್ಳರು 50 ಗ್ರಾಂ ಚಿನ್ನ, ಬೆಳ್ಳಿ ಸಾಮಗ್ರಿ ಹಾಗೂ ರೂ. 22 ಸಾವಿರ ನಗದು ಕಳ್ಳತನ ಮಾಡಿರುವದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಘಟನೆ ನಡೆದಿದೆ. ಕುಶಾಲನಗರ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.