ಸೋಮವಾರಪೇಟೆ, ಜೂ. 26: ನಿನ್ನೆ ಬೆಳಗ್ಗಿನಿಂದ ಸಂಜೆಯವರೆಗೂ ಸುರಿದ ಭಾರೀ ಮಳೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಹದೇಶ್ವರ ಬಡಾವಣೆಯ ಲಕ್ಷ್ಮಮ್ಮ ಎಂಬವರಿಗೆ ಸೇರಿದ ವಾಸದ ಮನೆಯ ಒಂದು ಪಾಶ್ರ್ವ ಕುಸಿದು ಬಿದ್ದಿದೆ.

ಭಾರೀ ಗಾಳಿ ಮಳೆಯಿಂದ ಅತೀ ಶೀತ ಉಂಟಾದ್ದರಿಂದ ಮನೆಯ ಒಂದು ಪಾಶ್ರ್ವ ಕುಸಿದುಬಿದ್ದ ಹಿನ್ನೆಲೆ, ಶೌಚಾಲಯ ಸಂಪೂರ್ಣ ಧರಾಶಾಹಿಯಾಗಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.