ಸುಂಟಿಕೊಪ್ಪ, ಜೂ. 22: ಆಸ್ಪತ್ರೆಗೆ ತೆರಳುವದಾಗಿ ತಿಳಿಸಿ ಹೋದ ಮಹಿಳೆ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಇಲ್ಲಿಗೆ ಸಮೀಪದ ತೊಂಡೂರು ನಿವಾಸಿ ಸದಾನಂದ ಎಂಬವರ ಪತ್ನಿ ಓಮನ (32) ಎಂಬಾಕೆ ಶುಕ್ರವಾರ ಅನಾರೋಗ್ಯದ ನಿಮಿತ್ತ ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಆಗಮಿಸಿದ್ದು, ಇಂದಿಗೂ ಮನೆಗೆ ಬಾರದಿರುವ ಬಗ್ಗೆ ಪತಿ ಸದಾನಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ಸಂಖ್ಯೆ 9481770976 ಗೆ ಕರೆ ಮಾಡುವಂತೆ ಕೋರಲಾಗಿದೆ.