ಸೋಮವಾರಪೇಟೆ, ಜೂ.26: ಸ್ಥಳೀಯ ಪೊಲೀಸ್ ಠಾಣೆಯ ವತಿಯಿಂದ ಅಂತರ್ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಜೇಸಿ ವೇದಿಕೆಯಲ್ಲಿ ಆಚರಿಸಲಾಯಿತು. ಡಿವೈಎಸ್ಪಿ ಟಿ.ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಕ ದ್ರವ್ಯ ಸೇವನೆ ಆರೋಗ್ಯದ ಮೇಲೆ ದೊಡ್ಡಮಟ್ಟದ ದುಷ್ಪರಿಣಾಮ ಬೀರುತ್ತದೆ. ಮಾದಕ ದ್ರವ್ಯ ವ್ಯಸನಿಗಳು ಸಮಾಜಕ್ಕೆ ಮತ್ತು ಕುಟುಂಬಕ್ಕೆ ಭಾರವಾಗುತ್ತಾರೆ. ಯುವಜನಾಂಗ ಮಾದಕ ದ್ರವ್ಯಗಳ ವ್ಯಸನದಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವೃತ್ತನಿರೀಕ್ಷಕ ಪ್ರದೀಪ್ ಕುಮಾರ್, ಠಾಣಾಧಿಕಾರಿ ಎಂ.ಮಹೇಶ್, ಸಹಾಯಕ ಠಾಣಾಧಿಕಾರಿ ಜಗದೀಶ್ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.