ನಾಪೆÇೀಕ್ಲು, ಮೇ 16: ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ದೊಡ್ಡಪುಲಿಕೋಟು ಮುಕ್ಕಾಟಿರ ಕುಟುಂಬದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ 17ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್‍ನ ಇಪ್ಪತ್ತೊಂಬತ್ತನೇ ದಿನದ ಪಂದ್ಯಾಟದಲ್ಲಿ ಕಂಬೀರಂಡ, ಮೇದುರ, ಕಳಕಂಡ, ಮಣವಟ್ಟಿರ, ಚೀಯಕಪೂವಂಡ, ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಕಂಬೀರಂಡ ಮತ್ತು ತಂಬುಕುತ್ತಿರ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ತಂಬುಕುತ್ತಿರ ತಂಡ 4 ವಿಕೆಟ್ ನಷ್ಟಕ್ಕೆ 54 ರನ್‍ಗಳ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಕಂಬೀರಂಡ ತಂಡ 1 ವಿಕೆಟ್ ಕಳೆದುಕೊಂಡು 55 ರನ್‍ಗಳಿಸಿ ಜಯಗಳಿಸಿತು. ಮೇದುರ ಮತ್ತು ಅಜ್ಜಿಕುಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬದಲೆರ ತಂಡ 2 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದರೆ, ಅದನ್ನು ಬೆನ್ನಟ್ಟಿದ ಅಜ್ಜಿಕುಟ್ಟಿರ ತಂಡ 6 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿ ಪರಾಭವಗೊಂಡಿತು. ಮಣವಟ್ಟಿರ ಮತ್ತು ಕಲ್ಯಾಟಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಲ್ಯಾಟಂಡ ತಂಡ 2 ವಿಕೆಟ್ ನಷ್ಟಕ್ಕೆ 31 ರನ್‍ಗಳಿಸಿದರೆ, ಅದನ್ನು ಹಿಂಬಾಲಿಸಿದ ಮಣವಟ್ಟಿರ ತಂಡ 3 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿ ಜಯಿಸಿತು. ಚೀಯಕಪೂವಂಡ ಮತ್ತು ಕೊಂಗಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಂಗಂಡ ತಂಡ 2 ವಿಕೆಟ್ ನಷ್ಟಕ್ಕೆ 67 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಚೀಯಕಪೂವಂಡ ತಂಡ 1 ವಿಕೆಟ್ ನಷ್ಟಕ್ಕೆ 69 ರನ್‍ಗಳಿಸಿ ಜಯಭೇರಿ ಬಾರಿಸಿತು. ಚೀಯಕಪೂವಂಡ ಅನಿಲ್ ವಯಕ್ತಿಕವಾಗಿ 46 ರನ್ ಪಡೆದರು. ಕೊಟ್ಟಂಗಡ ಮತ್ತು ಮಲ್ಲಜ್ಜಿರ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಲ್ಲಜ್ಜಿರ ತಂಡ 4 ವಿಕೆಟ್ ನಷ್ಟಕ್ಕೆ 41 ರನ್‍ಗಳ ಸವಾಲೊಡ್ಡಿತು. ಇದನ್ನು ಬೆನ್ನಟ್ಟಿದ ಕೊಟ್ಟಂಗಡ ತಂಡ 4 ವಿಕೆಟ್ ಕಳೆದುಕೊಂಡು 43 ರನ್ ಗಳಿಸಿ ಜಯಿಸಿತು. ಕುಟ್ಟಂಡ (ಅಮ್ಮತ್ತಿ) ಮತ್ತು ಚೆಕ್ಕೆರ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆಕ್ಕೆರ ತಂಡ 2 ವಿಕೆಟ್ ನಷ್ಟಕ್ಕೆ 69 ರನ್‍ಗಳಿಸಿತು. ಅದನ್ನು ಬೆನ್ನಟ್ಟಿದ ಕುಟ್ಟಂಡ ತಂಡ 2 ವಿಕೆಟ್ ನಷ್ಟಕ್ಕೆ 35 ರನ್‍ಗಳಿಸಿ ಚೆಕ್ಕೆರ ತಂಡಕ್ಕೆ ಶರಣಾಯಿತು.

ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತಂಬುಕುತ್ತಿರ ಅರುಣ್, ಅಜ್ಜಿಕುಟ್ಟಿರ ವಿಷ್ಣು, ಬದಲೆರ ಸನ್ನು, ಕಲ್ಯಾಟಂಡ ಸಚಿನ್, ಕೊಂಗಂಡ ನಿಲನ್, ಮಲ್ಲಜ್ಜಿರ ಭವನ್, ಕುಟ್ಟಂಡ ದಯಾ ಪಡೆದರು.

ತೀರ್ಪುಗಾರರಾಗಿ ಪೆÇರ್ಕೊಂಡ ಸುನಿಲ್, ಆಚೆಯಡ ಗಗನ್ ಗಣಪತಿ, ಬಲ್ಲಂಡ ವೇಣು, ಉದಯ, ನೆರವಂಡ ಸಂಪನ್. ವೀಕ್ಷಕ ವಿವರಣೆಗಾರರಾಗಿ ಮಣವಟ್ಟಿರ ದಯಾ ಕುಟ್ಟಪ್ಪ, ಕರವಂಡ ಅಪ್ಪಣ್ಣ, ಮುಕ್ಕಾಟಿರ ಸುತನ್. ತಾಂತ್ರಿಕ ವಿಭಾಗದಲ್ಲಿ ಚೆರುಮಂದಂಡ ಆಕಾಶ್ ಗಣಪತಿ, ಮುಕ್ಕಾಟಿರ ಸಂಪತ್, ಕರವಂಡ ರೋನಿ ಕಾರ್ಯನಿರ್ವಹಿಸಿದರು.