ಮಡಿಕೇರಿ, ಜೂ. 26: ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕೊಡಗಿನ ಯುವಕನೋರ್ವ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೂಲತಃ ಟಿ. ಶೆಟ್ಟಿಗೇರಿ ನಿವಾಸಿಯಾಗಿರುವ ಪ್ರಸ್ತುತ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿರುವ ಚೆಟ್ಟಂಡ್ರ ನಾಚಪ್ಪ ಅವರ ಪುತ್ರ ಪ್ರಜ್ವಲ್ ಪೊನ್ನಣ್ಣ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಮೈಸೂರಿನ ಜೆ.ಸಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಪೊನ್ನಣ್ಣ ಕಳೆದ ನಾಲ್ಕು ಸೆಮಿಸ್ಟರ್ನಲ್ಲೂ ಉತ್ತಮ ಸಾಧನೆ ತೋರಿದ್ದಾನೆ. ಐದನೇ ಸೆಮಿಸ್ಟರ್ ಸಂದರ್ಭ ಈತ ದಿಢೀರನೆ ಕಾಲೇಜಿಗೆ ತೆರಳಲು ನಿರಾಕರಿಸಲಾ ರಂಭಿಸಿದ್ದು, ಯಾರಿಗೂ ಕಾರಣ ಹೇಳುತ್ತಿರಲಿಲ್ಲವೆನ್ನ ಲಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಆತನ ಇಷ್ಟದಂತೆ ಕೋರ್ಸ್ ಬದಲಾಯಿಸಲು
ಮ್ಮತಿಸಿದ್ದು, ಪದವಿ ಶಿಕ್ಷಣಕ್ಕೆ ಬೆಂಗಳೂರಿನ ಜೈನ್ ಕಾಲೇಜ್ನಲ್ಲಿ ಎಡ್ಮಿಷನ್ ಸಹ ಮಾಡಿದ್ದರು. ಮೈಸೂರಿನಲ್ಲಿ ಪ್ರತ್ಯೇಕ ಮನೆಯಲ್ಲಿದ್ದ ಪೊನ್ನಣ್ಣ ಇಂದು ಬೆಂಗಳೂರಿಗೆ ತೆರಳಬೇಕಿತ್ತು.
ನಿನ್ನೆ ತಂದೆ ನಾಚಪ್ಪ ಹಾಗೂ ಶಿಕ್ಷಕಿಯಾಗಿರುವ ತಾಯಿ ವಾಣಿ ಮೈಸೂರಿಗೆ ತೆರಳಿದ್ದು, ರಾತ್ರಿ ಒಟ್ಟಿಗೆ ಊಟ ಮುಗಿಸಿ ಮಲಗಿದ್ದಾರೆ. ಪೊನ್ನಣ್ಣ ತನ್ನ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದು, ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಷಕರು ಬೆಳಿಗ್ಗೆ ಆತ ಬಾಗಿಲು ತೆರೆಯದಿದ್ದಾಗ ಕಿಟಕಿಯಿಂದ ನೋಡಿದ ಸಂದರ್ಭ ವಿಷಯ ಅರಿವಾಗಿದೆ. ಬೆಂಗಳೂರಿನ ಕಾಲೇಜಿಗೆ ತೆರಳಬೇಕಿದ್ದ ಪುತ್ರನ ಅಗಲಿಕೆಯಿಂದ ಪೋಷಕರು ದುಃಖದ ಕಡಲಲ್ಲಿ ಮುಳುಗಿದ್ದಾರೆ.