ಶನಿವಾರಸಂತೆ, ಜೂ. 8: ಕೊಡಗಿನ ಹಲವೆಡೆ ಕುಡಿಯುವ ನೀರಿಗೆ ಬರವಿದ್ದರೂ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ರಸ್ತೆಯ ಮಧ್ಯ ಭಾಗದಲ್ಲಿ ಪ್ರತಿನಿತ್ಯ ನೀರು ಪೋಲಾಗುತ್ತಿದೆ.

ಇಲ್ಲಿ ಕುಡಿಯುವ ನೀರಿನ ಪೈಪ್ ಒಡೆದು 2 ತಿಂಗಳಾಗಿದೆ. ಪಂಚಾಯಿತಿ ಸದಸ್ಯರು ಪ್ರತಿನಿತ್ಯ ಇದೇ ರಸ್ತೆಯಲ್ಲಿ ತಿರುಗಾಡುತ್ತಿದ್ದರೂ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಸದಸ್ಯರ ಕಣ್ಣಿಗೆ ಬಿದ್ದಿಲ್ಲ. ನೀರು ಹರಿದು ಗುಂಡಿ ಬಿದ್ದಿರುವ ರಸ್ತೆಯಲ್ಲಿ ತಿರುಗಾಡಲು ಸಾರ್ವಜನಿಕರಿಗೆ ನೀರು ಹಾರಿ ಬಟ್ಟೆಯನ್ನು ಕೆಸರುಮಯಗೊಳಿಸುತ್ತಿದೆ. ಸಾರ್ವಜನಿಕರು ಪಂಚಾಯಿತಿ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವದು ದಿನನಿತ್ಯ ನಡೆಯುತ್ತಿದೆ. ಇನ್ನಾದರೂ ಸರಿಪಡಿಸಿ ಹಾಳಾಗುತ್ತಿರುವ ರಸ್ತೆಯನ್ನು ಉಳಿಸುವಂತಾಗಲಿ ಎಂಬದು ಸಾರ್ವಜನಿಕರ ಕಾಳಜಿಯಾಗಿದೆ.

- ನರೇಶ್