ಸೋಮವಾರಪೇಟೆ, ಜೂ. 25: ಇಲ್ಲಿನ ರೋಟರಿ ಸಂಸ್ಥೆಯ 2016-17ನೇ ಸಾಲಿಗೆ ಅಧ್ಯಕ್ಷರಾಗಿ ವಕೀಲ ಕೆ.ಸಿ. ಭರತ್ ಭೀಮಯ್ಯ, ಕಾರ್ಯದರ್ಶಿಯಾಗಿ ಕೆ. ವನಮಾಲಿ ಹೆಬ್ಬಾರ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಉದಯ್ ಉದ್ದೂರಯ್ಯ, ಜಂಟಿ ಕಾರ್ಯದರ್ಶಿ ಡಿ.ಪಿ. ಪ್ರೀತಮ್, ಖಜಾಂಚಿಯಾಗಿ ಜೆ.ಕೆ. ಪೊನ್ನಪ್ಪ, ವಲಯ ಸೇನಾನಿ ಎಚ್.ಎ.ಸುಬ್ರಮಣ್ಯ, ಸಾಕ್ಷರತೆಯ ಮುಖ್ಯಸ್ಥ ಕೆ.ಡಿ.ಬಿದ್ದಪ್ಪ ಹಾಗು ನಿರ್ದೇಶಕರುಗಳಾಗಿ ಕೆ. ಶಿವಕುಮಾರ್, ಬಿ.ಎಂ. ದಿನೇಶ್, ಡಾ. ರಾಕೇಶ್ ಪಟೇಲ್, ಎಂ.ಡಿ. ಲಿಖಿತ್, ಎ.ಡಿ. ಶುಭಕರ್, ಬಿ.ಟಿ. ಸತೀಶ್, ಡಾ. ಓ.ವಿ. ಕೃಷ್ಣಾನಂದ, ಎ.ಪಿ. ವೀರರಾಜು, ಪಿ. ನಾಗೇಶ್, ಬಿ.ಎಸ್. ಸದಾನಂದ, ಎಂ.ಆರ್. ಮಮತ ಆಯ್ಕೆಯಾಗಿದ್ದಾರೆ.

ಮಾನಸಹಾಲ್ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಮಾಜಿ ರಾಜ್ಯಪಾಲ ಡಾ. ರವಿ ಅಪ್ಪಾಜಿ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರದ ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಅವರು ಮಾತನಾಡಿ, ಮನುಕುಲದ ಸೇವೆಯಲ್ಲಿ ತೊಡಗಿರುವ ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ, ವೃತ್ತಿ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ದಂತಹ ಕಾರ್ಯಕ್ರಮಗಳನ್ನು ನಡೆಸು ವದರೊಂದಿಗೆ ಸಾರ್ವಜನಿಕರಲ್ಲಿ ಪರಿಸರ ಪ್ರಜ್ಞೆ, ಜಾಗೃತಿ ಮೂಡಿಸಿದೆ ಎಂದರು.

ವೇದಿಕೆಯಲ್ಲಿ ರೋಟರಿ ಜಿಲ್ಲಾ ಮಾಜಿ ಸಹಾಯಕ ರಾಜ್ಯಪಾಲರು ಗಳಾದ ಬಿ.ವಿ. ಜವರೇಗೌಡ, ಎ.ಜಿ. ಡಾ. ಸಿ.ಆರ್. ಪ್ರಶಾಂತ್, ವಲಯ ಸೇನಾನಿಗಳಾದ ಡಿ.ಎಂ. ಕಿರಣ್, ಮಹೇಶ್ ಕುಮಾರ್, ನಿರ್ಗಮಿತ ಅಧ್ಯಕ್ಷ ಮೋಹನ್ ರಾಮ್ ಮತ್ತಿತರರು ಇದ್ದರು. ರೋಟರಿ ಜಿಲ್ಲಾ ಸಮಿತಿಗೆ ಎಸ್.ಡಿ. ವಿಜೇತ್, ಮಂಜು ನೀಲಕಂಠ, ಬಿ.ಎಸ್. ಸದಾನಂದ ಅವರುಗಳು ಆಯ್ಕೆಯಾದರು.