*ಗೋಣಿಕೊಪ್ಪಲು, ಜೂ. 30: ಕಳೆದ ಮೂರು ದಿನಗಳ ಹಿಂದೆ ಬಿಟ್ಟಂಗಾಲದ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಸ್ಥಳೀಯ ಕಾವೇರಿ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿ ಮಹಮದ್ ಅಫ್ರಿದಿ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾನೆ.
ಮಹಮದ್ ಅಫ್ರಿದಿ ಹಾಗೂ ಇತರ ಐವರು ಸ್ನೇಹಿತರು ಗುರುವಾರ ತರಗತಿ ಮುಗಿಸಿ ವೀರಾಜಪೇಟೆಗೆ ಇಫ್ತಿಯಾರ್ ಕೂಟಕ್ಕೆ ಕಾರಿನಲ್ಲಿ ಹೊಗುತ್ತಿದ್ದಾಗ ಕಾರು ಬಿಟ್ಟಂಗಾಲದ ಬಳಿ ಆಯತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದಿದೆ. ತಲೆಗೆ ತೀವ್ರಪೆಟ್ಟು ತಿಂದಿದ್ದ ಅಫ್ರಿದಿಯನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಇತರ ಮೂವರ ಸ್ಥಿತಿಯು ಗಂಭೀರವಾಗಿದೆ ಎನ್ನಲಾಗಿದೆ. ಶನಿವಾರ ಮೃತ ಅಫ್ರಿದಿಯ ಶವ ಸಂಸ್ಕಾರ ಗೋಣಿಕೊಪ್ಪಲಿನ ಹರಿಶ್ಚಂದ್ರಪುರದಲ್ಲಿ ನಡೆಯಿತು.