*ಗೋಣಿಕೊಪ್ಪಲು, ಜೂ. 21: ಪೊನ್ನಂಪೇಟೆ ಹಿರಿಯ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ಇಲ್ಲಿನ ರಾಮಕೃಷ್ಣ ಶಾರದಾಶ್ರಮ ನೀಡಿತು.

ಆಶ್ರಮದ ಅಧ್ಯಕ್ಷ ಭೋದಸ್ವರೂಪನಂದಾಜಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ ಪಾಂಡು ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಪುಸ್ತಕ, ಲೇಖನಿ ಸಾಮಗ್ರಿ, ಕೊಡೆಗಳನ್ನು ವಿತರಿಸಿದರು.

ಆಶ್ರಮದ ಹಿರಿಯ ಸನ್ಯಾಸಿ ಪರಹಿತಾನಂದಾ, ಸಿ.ಆರ್.ಪಿಗಳಾದ ವಾಮನ, ಜೀವನ್ ಹಾಜರಿದ್ದರು.