ಸುಂಟಿಕೊಪ್ಪ, ಜೂ. 27: ಪ್ರತಿಯೊಬ್ಬರಿಗೂ ವಿದ್ಯೆ ಅತೀ ಮುಖ್ಯ. ಶಿಕ್ಷಣ ಬದುಕಿನ ಅಂಧಕಾರವನ್ನು ಹೋಗಲಾಡಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಒತ್ತು ನೀಡಿ ಭವಿಷ್ಯತ್ತಿನಲ್ಲಿ ಸತ್ಪ್ರಜೆಗಳಾಗಿ ರೂಪು ಗೊಳ್ಳಬೇಕು ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕÀ ಗಣೇಶ್ ಕಾರ್ಣಿಕ್ ಕರೆ ನೀಡಿದರು.
ಸುಂಟಿಕೊಪ್ಪದ ಉಲುಗುಲಿ ರಸ್ತೆಯ ಬಳಿ ನಿರ್ಮಿಸಲಾದ ನೂತನ ಸರಕಾರಿ ಪದವಿಪೂರ್ವ ಕಾಲೇಜಿನ ಉದ್ಘಾಟನೆ ನೆರವೇರಿಸಿದ ನಂತರ ಸಂತಮೇರಿ ಶಾಲೆಯ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯ ಉನ್ನತ್ತೀಕರಣ ದಲ್ಲಿ ಆತನ ಪರಿಶ್ರಮ ಮುಖ್ಯ. ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಅರಿತು ತಂದೆ ತಾಯಿಗೆ ಉತ್ತಮ ಮಕ್ಕಳಾಗಿ ಗುರುಗಳಿಗೆ ವಿಧೇಯ ಶಿಷ್ಯರಾಗಿ ಇರಬೇಕು ಎಂದರು.