ಸೋಮವಾರಪೇಟೆ: ಇಲ್ಲಿಗೆ ಸಮೀಪದ ಯಡವಾರೆ ಕಾಜೂರು ಕ್ಲಸ್ಟರ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 50 ವಿದ್ಯಾರ್ಥಿಗಳಿಗೆ ರೂ. 30 ಸಾವಿರದ ಪುಸ್ತಕ, ಬ್ಯಾಗ್, ಕೊಡೆ ಹಾಗೂ ಶÀೂ ವಿತರಿಸಲಾಯಿತು.
ಶಾಲೆಯಲ್ಲಿ ನಡೆದ ಎಸ್ಡಿಎಂಸಿ ಹಾಗೂ ಪೋಷಕರ ಸಭೆಯಲ್ಲಿ ಯಡವಾರೆ ಗ್ರಾಮದ ದಾನಿಗಳಾದ ಚೆರಿಯಮನೆ ಹರಿಣಾಕ್ಷಿ ಮತ್ತು ಮೊಮ್ಮಕ್ಕಳಾದ ಚಾರ್ವಿ ಪೊನ್ನಪ್ಪ ಅವರುಗಳು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಸಭೆಯಲ್ಲಿ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ. ರಾಯ್, ಎಸ್ಡಿಎಂಸಿ ಅಧ್ಯಕ್ಷ ಎಂ.ಡಿ. ಜನಾರ್ಧನ್, ಉಪಾಧ್ಯಕ್ಷ ಸಿ.ಆರ್. ಶೈಲಾ, ಶಾಲಾ ಮುಖ್ಯ ಶಿಕ್ಷಕ ತಿಮ್ಮಯ್ಯ, ಶಿಕ್ಷಕರಾದ ಎಸ್. ರಾಜಶೇಖರ್, ಎಸ್. ರಾಜೇಶ್ ಬಾಬು, ಸಿ. ಕೆಂಪೇಗೌಡ, ಕೆ.ಎಂ. ಪ್ರಮೀಳಾ, ಅಂಗನವಾಡಿ ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು.ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಗದ್ದೆಹಳ್ಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದಾಖಲಾತಿ ಆಂದೋಲನ ಹಾಗೂ ಸರ್ವ ಶಿಕ್ಷಣ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಎ.ಪಿ. ಮೀನಾಕ್ಷಿ, ಶಿಕ್ಷಕಿಯರಾದ ಪುಷ್ಪಾವತಿ, ತಾರಾಮಣಿ, ಶೈಲಜಾ, ಹೇಮಕುಮಾರಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ಹಾಜರಿದ್ದರು.ನಾಪೆÇೀಕ್ಲು: ನಾಪೆÇೀಕ್ಲು ಮುತ್ತೂಟ್ ಹಣಕಾಸು ಸಂಸ್ಥೆಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಾಟೋಳಂಡ ಪ್ರಕಾಶ್ ವಿತರಿಸಿದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಜಾನಿ ರಾಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ. ರಮೇಶ್, ಮುತ್ತೂಟ್ ಸಂಸ್ಥೆಯ ಸಿಬ್ಬಂದಿ ಎಂ.ಕೆ. ಮಂದಣ್ಣ, ಸಿಬ್ಬಂದಿ ವರ್ಗದವರು ಹಾಜರಿದ್ದರು.ಮೇಕೇರಿ: ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೇಕೇರಿ ನಿವಾಸಿ ಬೆಂಗೂರಿನಲ್ಲಿ ಉದ್ಯಮಿಯಾಗಿರುವ ಮುರುಳೀಧರ್ ಅವರು ನೋಟ್ಸ್ ಪುಸ್ತಕ, ಸ್ವಚ್ಛತಾ ಸಾಮಗ್ರಿಯಾದ ಕಸದ ಬುಟ್ಟಿ ನೀಡಿದ್ದಾರೆ. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.