ಮಡಿಕೇರಿ, ಜೂ. 25: ವಿಶ್ವಕರ್ಮ ಸಮುದಾಯದ ಅಭ್ಯುದಯಕ್ಕಾಗಿ ವಿಶ್ವಕರ್ಮ ನಿಗಮದ ಮೂಲಕ ಸರ್ಕಾರ ಕೊಡಗು ಜಿಲ್ಲೆಗೆ 15 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಿಶ್ವಕರ್ಮ ಸಮಾಜಗಳ ಕೊಡಗು ಜಿಲ್ಲಾ ಒಕ್ಕೂಟ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ದೇವದಾಸ್, ಪ್ರತಿ ವರ್ಷದಂತೆ ಈ ಬಾರಿಯೂ ಶಿಕ್ಷಣ, ಕೃಷಿ, ವ್ಯಾಪಾರ ಮೊದಲಾದ ಸ್ವಾವಲಂಬಿ ಬದುಕಿಗೆ ಅಗತ್ಯವಿರುವ ಅನುದಾನವನ್ನು ನೀಡಲಾಗುತ್ತಿದ್ದು, 30 ಮಂದಿ ಫಲಾನುಭವಿಗಳಿಗೆ ಸಹಾಯ ಧನದೊಂದಿಗೆ ನೆರವನ್ನು ಒದಗಿಸಲಾಗುತ್ತಿದೆ ಎಂದರು. ಕಳೆದ ವರ್ಷ 20 ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ ಎಂದರು.
ಇದೇ ಜೂ. 30ರ ಒಳಗಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ದೇವದಾಸ್ ಮನವಿ ಮಾಡಿದರು. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಮಂದಿ ವಿಶ್ವಕರ್ಮ ಸಮುದಾಯದ ವರಿದ್ದು, ಯುವ ಘಟಕವನ್ನು ಕೂಡ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜಕ್ಕೆ ನಿರ್ದೇಶಕರನ್ನಾಗಿ ಕೊಡಗು ಜಿಲ್ಲೆಯಿಂದ ವಿ. ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಯುವ ಘಟಕಕ್ಕೆ ರಾಜ್ಯ ಸಮಿತಿಯ ಕಾರ್ಯದರ್ಶಿ ಯನ್ನಾಗಿ ಹೆಚ್. ಬಿ. ದಿನೇಶ್ ಆಚಾರ್ಯ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಯುವ ಘಟಕವನ್ನು ಸ್ಥಾಪಿಸಲು ಜು.17 ರಂದು ಕುಶಾಲನಗರದಲ್ಲಿ ಸಭೆಯನ್ನು ಕರೆಯಲಾಗಿದ್ದು, ಇಲ್ಲಿ ಸಂಘಟನೆಯ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವದೆಂದು ದೇವದಾಸ್ ತಿಳಿಸಿದರು. ವಿಶ್ವಕರ್ಮ ಸಮಾಜದ ಸದಸ್ಯತ್ವ ಪಡೆದುಕೊಳ್ಳುವವರು ಜಾತಿ ಪ್ರಮಾಣ ಪತ್ರದ ನಕಲು ಹಾಗೂ ಸದಸ್ಯತ್ವ ಶುಲ್ಕವನ್ನು ನೀಡಬೆÉೀಕೆಂದು ಅವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ರಾಜ್ಯ ಸಮಿತಿ ನಾಮ ನಿರ್ದೇಶಕ ಬಿ.ಸಿ. ಅಶೋಕ್ ಆಚಾರ್ಯ, ನಿರ್ದೇಶಕ ವಿ. ಕುಮಾರ್ ಆಚಾರ್ಯ, ಕುಶಾಲನಗರದ ಹೆಚ್.ಎಸ್. ಸೋಮಶೇಖರ್, ವೀರಾಜಪೇಟೆಯ ದಾಮೋದರ್ ಆಚಾರ್ಯ ಹಾಗೂ ಕಾರ್ಯದರ್ಶಿ ಹೆಚ್.ಬಿ. ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.