ವೀರಾಜಪೇಟೆ, ಜೂ. 26: ವೀರಾಜಪೇಟೆ ಲಯನ್ಸ್ ಕ್ಲಬ್‍ನ 2016-17ನೇ ಸಾಲಿನ ನೂತನ ಅಧ್ಯಕ್ಷರಾಗಿ ಐಚೆಟ್ಟಿರ ಸುತನ್ ಪೊನ್ನಪ್ಪ ಆಯ್ಕೆಯಾಗಿದ್ದಾರೆ. ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಯಾಗಿ ಮೋಹನ್ ರೈ, ಖಜಾಂಚಿಯಾಗಿ ಪೌಲ್ ಜೇವಿಯರ್ ಅಧಿಕಾರ ವಹಿಸಿಕೊಂಡರು. ಮಂಗಳೂರಿನ 2ನೇ ಗವರ್ನರ್ ಕೆ. ದೇವದಾಸ್ ಭಂಡಾರಿ ಪ್ರಮಾಣ ವಚನ ಬೋಧಿಸಿದರು. ಸಭೆಯಲ್ಲಿ ಪ್ರಾಂತೀಯ ಅಧ್ಯಕ್ಷ ನಾಳಿಯಂಡ ಪ್ರೀತಮ್ ಪೊನ್ನಪ್ಪ, ವಲಯಾಧ್ಯಕ್ಷ ಅಮ್ಮುಣಿಚಂಡ ಸುಬ್ರಮಣಿ, ನಂಜಪ್ಪ, ಸ್ಥಾಪಕ ಅಧ್ಯಕ್ಷ ಕರುಣಾಕರನ್ ಉಪಸ್ಥಿತರಿದ್ದರು. ಪ್ರೇಮಾ ವೆಂಕಟೇಶ್ ಸ್ವಾಗತಿಸಿ, ಎ.ಪಿ. ಪ್ರಸನ್ನ ವಂದಿಸಿದರು.