ಮಡಿಕೇರಿ, ಜೂ. 9: ಭಾರತೀಯ ಸಾಂಬಾರ ಮಂಡಳಿಯು ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಾಂಬಾರ ಬೆಳೆಗಳ ಸಸಿಗಳನ್ನು ಮಂಡಳಿಯ ಸಸ್ಯಪಾಲನ ಕೇಂದ್ರಗಳಿಂದ ಆಕರ್ಷಕ ದರಗಳಲ್ಲಿ ಬೆಳೆಗಾರರಿಗೆ, ಸಂಸ್ಥೆ, ಸರ್ಕಾರಿ ಇಲಾಖೆಗಳಿಗೆ ಮಾರಾಟ ಮಾಡಲಾಗುತ್ತಿದೆ.

ಸಾಂಬಾರ ಸಸಿಗಳ ವಿವರ ಇಂತಿದೆ: ಏಲಕ್ಕಿ ಸಸಿ (10 ತಿಂಗಳಿಂದ ಮೇಲ್ಪಟ್ಟು) ರೂ. 8, ಕಾಳುಮೆಣಸು (ಬೇರು ಬರಿಸಿದ ಪ್ರತಿ ಬಳ್ಳಿಗೆ ರೂ. 6.75) ಕಾಳುಮೆಣಸು ನ್ಯೂಕ್ಲಿಯಸ್ ಸಸಿಗಳು (ಒಂದು ಬಳ್ಳಿಗೆ) ರೂ. 10.25 ಆಗಿರುತ್ತದೆ.

ಸಸ್ಯಪಾಲನ ಕೇಂದ್ರಗಳ ವಿವರ ಇಂತಿದೆ: ಬೆಳಗೋಳ, ನಾರ್ವೆ ಅಂಚೆ, ಕೊಪ್ಪ ತಾ, ಚಿಕ್ಕಮಗಳೂರು ಜಿಲ್ಲೆ, ದೂ.ಸಂ, 08265-236239, ಬೆಟ್ಟದ ಮನೆ, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು ಜಿಲ್ಲೆ 08263-240902, ಯಸಳೂರು, ಸಕಲೇಶಪುರ ತಾಲೂಕು ಹಾಸನ ಜಿಲ್ಲೆ, ದೂ.ಸಂ, 08173-278166, ಐಗೂರು, ಸೋಮವಾರಪೇಟೆ ತಾಲೂಕು ದೂ.ಸಂ 08276-287852, ಬಿಳಿಗೇರಿ, ಮಡಿಕೇರಿ ತಾಲೂಕು ದೂ.ಸಂ 08272-227363.

ಆಸಕ್ತ ಬೆಳೆಗಾರರು ಮುಂಗಡ ಹಣದೊಂದಿಗೆ ಅರ್ಜಿಗಳನ್ನು ಸಲ್ಲಿಸಲು ತಾ. 20 ಕೊನೆಯ ದಿನವಾಗಿರುತ್ತದೆ. ನಿಗದಿತ ಅರ್ಜಿ ಮತ್ತು ಹೆಚ್ಚಿನ ವಿವರಗಳಿಗೆ ಸಮೀಪದ ಭಾರತೀಯ ಸಾಂಬಾರ ಮಂಡಳಿಯ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹಾಸನ ಜಿಲ್ಲೆ ಭಾರತೀಯ ಸಂಬಾರ ಮಂಡಳಿ ಉಪ ನಿರ್ದೇಶಕ ಬಿ.ಎಂ. ಜಯರಾಮ್ ತಿಳಿಸಿದ್ದಾರೆ.