ಹೆಬ್ಬಾಲೆ, ಮೇ 10: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಬಸವೇಶ್ವರ ದೇವಾಲಯ ಸಮಿತಿಯ ವತಿಯಿಂದ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎನ್. ಶಿವನಂಜಪ್ಪ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಮಾತನಾಡಿದ ಅವರು ಬಸವಣ್ಣನವರು ಕೊಟ್ಟ ಕಾಯಕ, ಸಾಮಾಜಿಕ ಸಮಾನತೆ ಇಂದಿಗೂ ಆದರ್ಶವಾಗಿವೆ ಎಂದರು. ನಂತರ ಎತ್ತಿನ ಗಾಡಿಯಲ್ಲಿ ಬಸವಣ್ಣನವರ ಭಾವಚಿತ್ರವನ್ನಿರಿಸಿ, ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿ ಸಾಗಿದರು. ಮೆರವಣಿಗೆಯ ಉದ್ದಕ್ಕೂ ಗ್ರಾಮಸ್ಥರಿಗೆ ಪಾನಕ, ಮಜ್ಜಿಗೆಯನ್ನು ವಿತರಿಸಿದರು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಸದಾಶಿವ, ಕಾರ್ಯದರ್ಶಿ ರಮೇಶ್, ಮಲ್ಲಿಕಾರ್ಜುನಾ, ನೀಲಾಚಾರಿ, ಸಿದ್ದಲಿಂಗಪ್ಪ, ಧನಂಜಯ, ಚಂದ್ರಪ್ಪ ಹಾಗೂ ಗ್ರಾಮಸ್ಥರು ಇದ್ದರು.