ಒಂದು ಮನೆ ಕಟ್ಟಿದರೂ., ವಾಹನ ತಕೊಂಡರೂ., ಮದುವೆ ಆದರೂ., ಮಗು ಜನಿಸಿದರೂ., ಹೆಚ್ಚು ಮಾರ್ಕ್ಸ್ ತೆಗೆದರೂ., ಏನಾದರೂ ಸಾಧನೆ ಮಾಡಿದರೂ., ಯಾವದೇ ಶುಭ ಸಮಾಚಾರಗಳಿದ್ದರೂ ಎಲ್ಲರೂ ಮೊದಲು ಕೇಳುವುದು ‘ಸ್ವೀಟ್’ ಕೊಡಲ್ವ..?

ಹೌದಲ್ವ.., ಸ್ವೀಟ್-ಸಿಹಿ ಅಂದರೆ ಎಲ್ಲರಿಗೂ ಇಷ್ಟವೇ. ಹಸುಗೂಸಿನಿಂದ ಹಿಡಿದು ವಯೋವೃದ್ಧರಾದವರ ತುಟಿಗೆ ಒಂದಿಷ್ಟು ಸಿಹಿ ಸವರಿದರೆ ಚಪ್ಪರಿಸಿ ನಗುತ್ತಾರೆ. ಸಿಹಿ ಇಷ್ಟಪಡುವವರು ಚಾಕೋಲೇಟ್ ಕಂಡರೆ ಬಿಡುತ್ತಾರಾ..? ಅದರಲ್ಲೂ ಮಕ್ಕಳಿಗಂತೂ ಚಾಕೋಲೇಟ್ ತುಂಬಾನೇ ಇಷ್ಟ.., ಹೆಣ್ಣು ಮಕ್ಕಳಿಗಂತೂ ಚಾಕೋಲೇಟ್ ಪಂಚಪ್ರಾಣ., ಊಟವಿಲ್ಲದಿದ್ದರೂ ಚಾಕೋಲೇಟ್ ಇದ್ದರೆ ಸಾಕು..!

ರುಚಿಯೊಂದಿಗೆ ಮನಸಿಗೆ ಆಹ್ಲಾದ, ಮುದ ನೀಡುವ., ಬಾಯಿ ಚಪ್ಪರಿಸಿಕೊಳ್ಳುವಂತೆ ಮಾಡುವ ಚಾಕೋಲೇಟ್‌ಗಳು ಪ್ರೀತಿಯ ಸಂಕೇತವೂ ಹೌದು.,! ಪ್ರೇಮಿಗಳ ಹೃದಯಗಳ ನಡುವಿನ ರಾಯಭಾರಿ ಈ ಚಾಕೋಲೇಟ್,.!

ಮಧುಮೇಹಿಗಳು ಮಾತ್ರ ಸ್ವಲ್ಪ ದೂರವಿಡುವ., ಉಳಿದಂತೆ ಎಲ್ಲರ ಅಚ್ಚುಮೆಚ್ಚಿನ ತಿನಿಸಾಗಿರುವ ಚಾಕೋಲೇಟ್‌ಗಳನ್ನು ಸವಿಯಲು, ಅದರ ಇತಿಹಾಸವನ್ನು ತಿಳಿದುಕೊಳ್ಳಲು ಒಂದು ದಿನವನ್ನು ನಿಗದಿಪಡಿಸಲಾಗಿದೆ. ವರ್ಷಂಪ್ರತಿ ಜುಲೈ ೭ರಂದು ಈ ದಿನವನ್ನು ಸಂಭ್ರಮದಿAದ ಆಚರಿಸಲಾಗುತ್ತದೆ..!

ಯಾವದೇ ಕಾರ್ಯಕ್ರಮ, ಸಮಾರಂಭವಿರಲಿ ಸಿಹಿಯನ್ನು ಹಂಚಿ ಸಂಭ್ರಮಿಸುತ್ತೇವೆ. ಮಕ್ಕಳು ಕೋಪ ಮಾಡಿಕೊಂಡು ಅಳುತ್ತಿರುವಾಗ ಸಮಾಧಾನಿಸಲು ಮೊದಲು ಸಿಗೋದೇ ಚಾಕೋಲೇಟ್., ಪ್ರೇಯಸಿ ಸಿಟ್ಟುಗೊಂಡರೆ ಕೈಯ್ಯಲೊಂದು ಚಾಕೋಲೇಟ್ ಹಿಡಿದುಕೊಂಡು ಏನಾದರೊಂದು ಕಾರಣ ನೀಡುತ್ತಾ ಪ್ರೇಮಿ ಎದುರು ನಿಂತರೆ ಸಿಟ್ಟು ಅರೆಕ್ಷಣದಲ್ಲಿ ಮಾಯ..! ಮನೆಯಲ್ಲಿ ಹೆಂಡತಿ ಸಿಟ್ಟುಮಾಡಿಕೊಂಡರೆ ‘ಇತ್ತ ಗಂಡ ಯಾವ ಸ್ವೀಟ್ ತರಲೇ..?’ ಎಂದು ಕೇಳಿದರೆ ಸಾಕು ಮುಖದಲ್ಲಿ ನಗು ರಂಗೇರಿಯಾಗಿರುತ್ತದೆ., ದೇಹದಲ್ಲಿ ಶುಗರ್ ಫ್ಯಾಕ್ಟರಿಯೇ ಇದ್ದರೂ ಸಿಹಿ ಕಂಡಾಕ್ಷಣ ಒಂದು ಚೂರಾದರೂ ಚಪ್ಪರಿಸದೇ ಬಿಡಲಾರರು..! ಪ್ರಾಣಿ ಪಕ್ಷಿಗಳಿಗೂ ಈ ಸಿಹಿ ಅಂದರೆ ಇಷ್ಟವೇ., ಹೆಚ್ಚಾಗಿ ಸಿಹಿಯಾಗಿರುವ ಹಣ್ಣು, ಹೂವಿನ ಮಕರಂಧವನ್ನು ಸ್ವಾಧಿಸುತ್ತವೆ..!

ಈ ಸಿಹಿ ಎಂಬ ಪದಾರ್ಥಗಳಲ್ಲಿ ಚಾಕೋಲೇಟ್ ಕೂಡ ಒಂದಾಗಿದೆ. ಸಕಲ ಜೀವ ಜಂತುಗಳಲ್ಲಿ ಬೆರೆತುಹೋಗಿರುವ ಸವಿರುಚಿಯ ಚಾಕೋಲೇಟ್‌ಗಳನ್ನು ಸವಿಯುತ್ತಾ, ಅದರ ಮಹತ್ವವನ್ನು ಅರಿತು ಸಂಭ್ರಮಿಸುವ ಸಲುವಾಗಿ ಚಾಕೋಲೇಟ್ ದಿನವನ್ನು ಆಚರಿಸಲಾಗುತ್ತಿದೆ., ಜುಲೈ ೭ರಂದು ವಿಶ್ವ ಚಾಕೋಲೇಟ್ ದಿನವನ್ನಾಗಿ ಆಚರಿಸಿದರೆ, ಭಾರತ ದೇಶದಲ್ಲಿ ಸೆಪ್ಟೆಂಬರ್ ೧೪ರಂದು ರಾಷ್ಟಿçÃಯ ಚಾಕೋಲೇಟ್ ದಿನವೆಂದು ಆಚರಿಸಲಾಗುತ್ತದೆ.

ಚಾಕೋಲೇಟ್ ಇತಿಹಾಸ

ಚಾಕೋಲೇಟ್‌ನ ಇತಿಹಾಸವು ಕ್ರಿ.ಶ. ೧೫೫೦ಕ್ಕೂ ಅಧಿಕ ಹಿಂದಿನದ್ದೆAದು ಹೇಳಲಾಗುತ್ತದೆ. ಆದರೆ ಮೊದಲ ಬಾರಿಗೆ ೨೦೦೯ರಲ್ಲಿ ಆಚರಣೆಗೆ ತರಲಾಗಿದೆ ಎಂಬದು ತಿಳಿದುಬರುತ್ತದೆ. ಚಾಕೋಲೇಟ್‌ನ ವಿಕಾಸವು ೨೦೦೦ವರ್ಷಗಳ ಹಿಂದೆ ಆಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಚಾಕೋಲೇಟ್‌ನ ಮೂಲ ಓಲೈಕ್ ನಾಗರಿಕತೆಯದ್ದಾಗಿದ್ದು, ಮಾಯಾ ಮತ್ತು ಅಜ್ಟೆಕ್ ಬುಡಕಟ್ಟು ಜನಾಂಗದವರು ಕೋಕೋ ಬೀಜಗಳನ್ನು ಬಳಸಿ ಮೊದಲ ಬಾರಿಗೆ ಚಾಕೋಲೇಟ್ ತಯಾರಿಸಿದರು. ಅದು ಸಿಹಿಯಾಗಿರಲಿಲ್ಲ ದ್ರವ ರೂಪದಲ್ಲಿ ಕಹಿ ಪದಾರ್ಥವನ್ನು ಪಾನೀಯವಾಗಿ ಸೇವಿಸುತ್ತಿದ್ದರು. ೧೮೪೭ರವರೆಗೂ ಕಹಿಯಾಗಿಯೇ ಇತ್ತು. ನಂತರದಲ್ಲಿ ಸ್ವಿಸ್ ಚಾಕೋಲೇಟರ್ ಡೇನಿಯಲ್ ಪೀಟರ್ ಎಂಟು ವರ್ಷಗಳ ಕಾಲ ಹಾಲಿನ ಚಾಕೋಲೇಟ್ ಪಾಕ ವಿಧಾನವನ್ನು ಕಂಡು ಹಿಡಿಯಲು ಪ್ರಯತ್ನಿಸಿ ಯಶಸ್ವಿಯಾದರು. ನಂತರದಲ್ಲಿ ಸಿಹಿಯಾದ ಚಾಕೋಲೇಟ್ ತಯಾರಿಕೆಯೊಂದಿಗೆ ಸಿಹಿ ಉದ್ಯಮದಲ್ಲಿ ಪ್ರಮುಖ ಸ್ಥಾನ ಪಡೆಯುವಂತಾಯಿತು.

ಪ್ರೀತಿಯ ಉಡುಗೊರೆ

ಸ್ನೇಹ, ಪ್ರೀತಿಯನ್ನು ತೋರ್ಪಡಿಸಲು ಚಾಕೋಲೇಟ್ ಒಂದು ಉತ್ತಮ ಉಡುಗೊರೆಯಾಗಿದೆ. ಹಾಗಾಗಿ ಪ್ರೇಮಿಗಳ ದಿನದಂದು ಚಾಕೋಲೇಟ್‌ಗೆ ಪ್ರಾಮುಖ್ಯತೆ ನೀಡಲಾಗಿದೆ. ಫೆ.೭ರಿಂದ ೧೪ರವರೆಗೆ ಪ್ರೇಮಿಗಳ ವಾರವೆಂದು(ವ್ಯಾಲೈAಟೈನ್ಸ್ ವೀಕ್) ಎಂದು ಆಚರಿಸಲಾಗುತ್ತಿದ್ದು, ಇದರಲ್ಲಿ ಮೂರನೇ ದಿನವಾದ ಫೆ.೯ರಂದು ಚಾಕೋಲೇಟ್ ದಿನವಾಗಿದೆ. ಅಂದು ಪ್ರೇಮಿಗಳು ಪರಸ್ಪರ ಚಾಕೋಲೇಟ್‌ಗಳನ್ನು ಉಡುಗೊರೆಯಾಗಿ ಹಂಚಿಕೊAಡು ಪರಸ್ಪರ ತುಟಿಗಳನ್ನು ‘ಸಿಹಿ’ ಮಾಡಿಕೊಳ್ಳುತ್ತಾರೆ..!

ಜಗತ್ತಿನಲ್ಲಿರುವ ಸಿಹಿ ಪ್ರಿಯರು ಒಬ್ಬರಿಗೊಬ್ಬರು ಯಾವದೇ ವಯಸು, ಲಿಂಗ ಭೇದವಿಲ್ಲದೆ ಪ್ರೀತಿ ಪಾತ್ರರಿಗೆ ಚಾಕೋಲೇಟ್‌ಗಳನ್ನು ಉಡುಗೊರೆಯಾಗಿ ನೀಡಿ ಸಂಭ್ರಮ ಆಚರಿಸಿಕೊಳ್ಳುವ ಈ ದಿನದಂದು ಪ್ರೀತಿಯಿಂದ ಸಿಹಿಯಾದ ಚಾಕೋಲೇಟ್ ಹಂಚಿಕೊAಡು ಬಾಯಿ ಸಿಹಿ ಮಾಡಿಕೊಳ್ಳೋಣ..!

-ಕುಡೆಕಲ್ ಸಂತೋಷ್