ಮಡಿಕೇರಿ, ಜು. ೬: ನಿನ್ನೆ ದಿನ ಗುಡ್ಡೆಹೊಸೂರು - ಸಿದ್ದಾಪುರ ರಸ್ತೆಯ ತೆಪ್ಪದಕಂಡಿ ಸೇತುವೆ ಸಮೀಪ ಶಿಕ್ಷಣ ಸಂಸ್ಥೆಯೊAದರ ಬಸ್ಗೆ ಹಿಂಬದಿಯಿAದ ಪಿಕಪ್ ಡಿಕ್ಕಿಯಾಗಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಪಿಕಪ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಮಧ್ಯಾಹ್ನ ೨.೩೦ ಗಂಟೆ ವೇಳೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆಹೊಸೂರು - ಸಿದ್ದಾಪುರ ರಸ್ತೆಯ ತೆಪ್ಪದಕಂಡಿ ಸೇತುವೆ ಸಮೀಪ ಶಿಕ್ಷಣ ಸಂಸ್ಥೆಯೊAದರ ಬಸ್ನ ಹಿಂಬದಿಗೆ ಮಹೀಂದ್ರ ಪಿಕಪ್ ವಾಹನ (ಕೆ.ಎ. ೧೨ ಬಿ. ೮೭೬೨) ಡಿಕ್ಕಿ ಹೊಡೆದಿತ್ತು. ಈ ಪ್ರಕರಣಕ್ಕೆ ಸಂಬAಧಿಸಿದAತೆ ಪಿಕಪ್ನ ಚಾಲಕ ತೀರ್ಥಪ್ರಸಾದ್ (೫೧) ಎಂಬಾತ ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡುಬAದಿದ್ದು, ಮದ್ಯಪಾನ ಮಾಡಿ ರಸ್ತೆಯಲ್ಲಿ ವಾಹನ ಚಲಾಯಿಸುವ ಸಂದರ್ಭ ಅಪಘಾತವಾದಲ್ಲಿ ಜೀವಕ್ಕೆ ಹಾನಿಯುಂಟಾಗುವ ಬಗ್ಗೆ ಅರಿವಿದ್ದರೂ ಕೂಡ ಮದ್ಯಪಾನ ಮಾಡಿ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಬಸ್ಗೆ ಡಿಕ್ಕಿಪಡಿಸಿದ ಗೊಂದಿಬಸವನಹಳ್ಳಿಯ ನಿವಾಸಿ ಚಾಲಕ ತೀರ್ಥಪ್ರಸಾದ್ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಕಲಂ ೨೮೧, ೧೧೦ ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.