೪೦ ಕೋಟಿ ಹಣದೊಂದಿಗೆ ದಂಪತಿ ಪರಾರಿ!
ಬೆಂಗಳೂರು, ಜು. ೭: ಚೀಟಿ ಹಣದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದ್ದ ಸುಧಾ ಹಾಗೂ ಸಿದ್ದಿಚಾರಿ ಎಂಬ ದಂಪತಿ ಇದೀಗ ಸಾರ್ವಜನಿಕರಿಗೆ ಮೋಸ ಮಾಡಿ ಹಣದೊಂದಿಗೆ ಪರಾರಿಯಾಗಿದ್ದಾರೆ. ಬೆಂಗಳೂರಿನ ಜರಗನಹಳ್ಲಿಯಲ್ಲಿ ಘಟನೆ ನಡೆದಿದ್ದು ದಂಪತಿ ಸುಮಾರು ೪೦ ಕೋಟಿ ರೂ. ಚೀಟಿ ಹಣದೊಂದಿಗೆ ಪರಾರಿ ಆಗಿದ್ದಾರೆ. ೨೦ ವರ್ಷಗಳಿಂದ ಜರಗನಹಳ್ಳಿಯಲ್ಲಿ ವಾಸವಾಗಿದ್ದ ದಂಪತಿ ಚೀಟಿ ವ್ಯವಹಾರದ ಹೆಸರಲ್ಲಿ ೬೦೦ಕ್ಕೂ ಹೆಚ್ಚು ಜನರಿಂದ ಹಣ ಕಟ್ಟಿಸಿಕೊಂಡಿದ್ದರು. ಇವರನ್ನು ನಂಬಿದ ಜನರು ೫ ರಿಂದ ೧೦ ಲಕ್ಷದವರೆಗೂ ಹಣ ನೀಡಿದ್ದಾರೆ. ಆರಂಭದಲ್ಲಿ ಚೀಟಿ ಹಣ ಕೊಡುತ್ತಿದ್ದ ದಂಪತಿ ಕಳೆದ ಒಂದು ವರ್ಷದಿಂದ ಹಣ ನೀಡದೇ ಸತಾಯಿಸುತ್ತಿದ್ದರು. ಇದೀಗ ದಂಪತಿ ಪರಾರಿಯಾಗಿದ್ದು ಈ ಸಂಬAಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೆ ದಂಪತಿಯ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ.
ಡೆತ್‌ನೋಟ್ ಬರೆದಿಟ್ಟು, ಪಿಎಸ್‌ಐ ನೇಣಿಗೆ ಶರಣು!
ತುಮಕೂರು, ಜು. ೬: ಕೌಟುಂಬಿಕ ಕಹಲದಿಂದ ಬೇಸತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಲಾಡ್ಜ್ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ದಾವಣಗೆರೆ ನಗರದ ಬಡಾವಣೆ ಪಿಎಸ್‌ಐ ನಾಗರಾಜಪ್ಪ (೪೫) ಆತ್ಮಹತ್ಯೆ ಮಾಡಿಕೊಂಡವರು. ತಾ.೧ರಂದು ಬೆಳಿಗ್ಗೆ ೭ ಗಂಟೆಗೆ ದ್ವಾರಕಾ ಹೊಟೇಲ್‌ನ ೪ನೇ ಮಹಡಿಯಲ್ಲಿ ರೂಮ್ ಬಾಡಿಗೆ ಪಡೆದಿದ್ದ ನಾಗರಾಜಪ್ಪ, ರೂಮ್‌ಗೆ ತೆರಳಿದ್ದಾಗಿನಿಂದ ಹೊರಗೆ ಬಂದಿರಲಿಲ್ಲ. ಲಾಡ್ಜ್ ಸಿಬ್ಬಂದಿ ಕರೆ ಮಾಡಿದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಲಾಡ್ಜ್ನಲ್ಲಿ ದುರ್ವಾಸನೆ ಬಂದಾಗ, ಸಿಬ್ಬಂದಿ ಮಾಲೀಕರಿಗೆ ಮಾಹಿತಿ ನೀಡಿದ್ದರು. ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತದನಂತರ ಸುದ್ದಿ ತಿಳಿದು ತುಮಕೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಅವರು ನೇಣಿಗೆ ಶರಣಾಗಿದ್ದು, ಮೃತದೇಹ ಕೊಳೆತು ಹುಳಗಳಾಗಿದ್ದವು ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.ನಾಗರಾಜಪ್ಪ ಆತ್ಮಹತ್ಯೆ ಮಾಡಿಕೊಂಡ ರೂಮ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ೨ ಪುಟಗಳ ಡೆತ್ ನೋಟ್ ನಲ್ಲಿ `ನನ್ನ ಸಾವಿಗೆ ನಾನೇ ಕಾರಣ’. ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಅಲ್ಲದೇ ಹೋಟೆಲ್ ಮಾಲೀಕರಿಗೂ ಡೆತ್‌ನೋಟ್‌ನಲ್ಲಿ ಕ್ಷಮೆ ಕೇಳಿದ್ದಾರೆ.
ಗಣಪತಿ, ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ
ಶಿವಮೊಗ್ಗ, ಜು. ೬: ಶಿವಮೊಗ್ಗದ ರಾಗಿಗುಡ್ಡದಲ್ಲಿನ ನಾಗರ ಕಟ್ಟೆಯ ಮೇಲಿದ್ದ ಗಣಪತಿ ಹಾಗೂ ಶೇಷನಾಗ ವಿಗ್ರಹಗಳನ್ನು ವಿರೂಪಗೊಳಿಸಿ ಕಾಲಿನಿಂದ ಒದ್ದು ಚರಂಡಿಗೆ ಎಸೆದು ವಿಕೃತ ಮೆರೆದ ಘಟನೆ ನಡೆದಿದೆ. ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ, ಶೇಷ ನಾಗ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿದೆ. ಅನ್ಯಕೋಮಿನ ಯುವಕರಿಂದ ದುಷ್ಕೃತ್ಯ ನಡೆದಿದೆ ಎನ್ನಲಾಗಿದ್ದು, ಘಟನೆ ಬೆನ್ನಲ್ಲೇ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂದು ಸ್ಥಳೀಯರ ಆಕ್ರೋಶ ಹೊರಹಾಕಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಜಿ.ಕೆ ಮಿಥುನ್ ಕುಮಾರ್, ಶಿವಮೊಗ್ಗ ಸಬ್ ಡಿವಿಜನ್-೨ ಡಿವೈಎಸ್ಪಿ ಸಂಜೀವ್ ಕುಮಾರ್ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಸ್ಥಳೀಯರ ಜೊತೆ ಮಾತುಕತೆ ನಡೆಸಿ ಅಧಿಕಾರಿಗಳು, ದೂರು ನೀಡುವಂತೆ ಮನವಿ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆAದು ತಿಳಿದುಬಂದಿದೆ.
ಕೊಲೆ ಪ್ರಕರಣ: ಕೊನೆಗೂ ಪೊಲೀಸರ ಬಲೆಗೆ ಬಿದ್ದ ಟ್ಯಾಕ್ಸಿ ಕಿಲ್ಲರ್!
ನವದೆಹಲಿ, ಜು. ೬: ಟ್ಯಾಕ್ಸಿ ಬಾಡಿಗೆಗೆ ಪಡೆದು, ಚಾಲಕರನ್ನು ಕೊಂದು ಉತ್ತರಾಖಂಡದ ದಟ್ಟ ಅರಣ್ಯ ಪ್ರದೇಶದಲ್ಲಿ ಎಸೆದು ಟ್ಯಾಕ್ಸಿ ವಾಹನಗಳನ್ನು ನೇಪಾಳದ ಗಡಿಯಲ್ಲಿ ಮಾರಾಟ ಮಾಡುತ್ತಾ ಸುಮಾರು ೨೫ ವರ್ಷಗಳಿಂದ ತಲೆಮರೆಸಿಕೊಂಡಿದ್ದ ೪೯ ವರ್ಷದ ಟ್ಯಾಕ್ಸಿ ಕಿಲ್ಲರ್ ನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆರೋಪಿ ಅಜಯ್ ಲಂಬಾ ಅಲಿಯಾಸ್ ಬನ್ಶಿ ದೆಹಲಿ ಮತ್ತು ಉತ್ತರಾಖಂಡ್‌ನಾದ್ಯAತ ನಾಲ್ಕು ಕ್ರೂರ ದರೋಡೆ ಮತ್ತು ಕೊಲೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ರಾಷ್ಟç ರಾಜಧಾನಿಯ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ೨೦೦೧ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣಗಳಲ್ಲಿ ಆತನನ್ನು ಅಪರಾಧಿ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ೧೯೯೯ ಮತ್ತು ೨೦೦೧ ರ ನಡುವೆ ನಡೆದ ಘೋರ ಅಪರಾಧಗಳ ಹಿಂದೆ ಲಂಬಾ ಮಾಸ್ಟರ್‌ಮೈಂಡ್ ಆಗಿದ್ದು, ಆತ ತನ್ನ ಸಹಚರರೊಂದಿಗೆ ಟ್ಯಾಕ್ಸಿ ಚಾಲಕರನ್ನು ಕೊಂದು, ಟ್ಯಾಕ್ಸಿಗಳನ್ನು ಲೂಟಿ ಮಾಡಿ ಉತ್ತರಾಖಂಡದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಶವಗಳನ್ನು ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ವಿರುದ್ಧ ದೆಹಲಿಯಲ್ಲಿ ನಾಲ್ಕು ದರೋಡೆ, ಕೊಲೆ ಪ್ರಕರಣ ದಾಖಲಾಗಿದ್ದು, ಅಪರಾಧಿ ಎಂದು ಘೋಷಿಸಲಾಗಿದೆ. ಕೆಲಕಾಲ ೨೦೦೮ ರಿಂದ ೨೦೧೮ ರವರೆಗೆ ತಮ್ಮ ಕುಟುಂಬದೊAದಿಗೆ ನೇಪಾಳದಲ್ಲಿ ವಾಸಿಸುತ್ತಿದ್ದ ಆರೋಪಿ ತದನಂತರ ಡೆಹ್ರಾಡೂನ್‌ಗೆ ತೆರಳಿದ್ದ. ೨೦೨೦ ರಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ ಹಂತಕ, ಒಡಿಶಾದಿಂದ ದೆಹಲಿ ಮತ್ತು ಭಾರತದ ಇತರ ಭಾಗಗಳಿಗೆ ಗಾಂಜಾ ಸರಬರಾಜು ಜಾಲದಲ್ಲಿ ಕೆಲಸ ಮಾಡುತ್ತಿದ್ದ ಎಂಡಿ ಡಿಸಿಪಿ ದಿಲೀಪ್ ನೇಗಿ ತಿಳಿಸಿದ್ದಾರೆ.
ಚೀನಾದ ಸೈಬರ್ ಕ್ರಿಮಿನಲ್‌ಗಳ ಪರ ಕೆಲಸ ಮಾಡುತ್ತಿದ್ದ ಏಳು ಮಂದಿಯ ಬಂಧನ
ರಾAಚಿ, ಜು. ೬: ಚೀನಾದ ಸೈಬರ್ ಕ್ರಿಮಿನಲ್ ಗಳಿಗಾಗಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದ ಏಳು ಜನರನ್ನು ಜಾರ್ಖಂಡ್‌ನ ಅಪರಾಧ ತನಿಖಾ ಬ್ಯೂರೋ ಸೈಬರ್ ಕ್ರೆöÊಂ ಬ್ರಾಂಚ್ ಬಂಧಿಸಿದೆ. ಈ ಸಂಬAಧ ಜುಲೈ ೪ ರಂದು ಸಿಐಡಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ರಾಂಚಿಯ ಹೋಟೆಲ್ ಒಂದರಲ್ಲಿ ಡಿಜಿಟಲ್ ಆರೆಸ್ಟ್ ಮತ್ತು ಹೂಡಿಕೆಯ ಹೆಸರಿನಲ್ಲಿ ಸೈಬರ್ ಕ್ರಿಮಿನಲ್‌ಗಳ ಗ್ಯಾಂಗ್ ವಂಚನೆಯ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಸೈಬರ್ ಪೊಲೀಸ್ ಠಾಣೆಗೆ ಗೌಪ್ಯ ಮಾಹಿತಿ ಸಿಕ್ಕಿತು. ಈ ಮಾಹಿತಿಯ ಮೇರೆಗೆ ಸೈಬರ್ ಕ್ರೆöÊಂ ಬ್ರಾಂಚ್ ಹೊಟೇಲ್ ಮೇಲೆ ದಾಳಿ ನಡೆಸಿ ಏಳು ಸೈಬರ್ ಅಪರಾಧಿಗಳನ್ನು ಬಂಧಿಸಿದೆ ಎಂದು ತಿಳಿಸಲಾಗಿದೆ. ಬಂಧಿತ ಸೈಬರ್ ಕ್ರಿಮಿನಲ್‌ಗಳಿಂದ ೧೨ ಮೊಬೈಲ್‌ಗಳು, ೧೧ ಲ್ಯಾಪ್‌ಟಾಪ್‌ಗಳು, ೧೪ ಎಟಿಎಂಗಳು, ಚೆಕ್‌ಬುಕ್‌ಗಳು ಮತ್ತು ೬೦ ಕ್ಕೂ ಹೆಚ್ಚು ವಾಟ್ಸಾಪ್ ಮತ್ತು ಟೆಲಿಗ್ರಾಂ ಚಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿ ಅಧಿಕೃತ ಪ್ರಕಟಣೆ ತಿಳಿಸಿದೆ. ಬಂಧಿತರೆಲ್ಲರೂ ಚೀನಾದ ಸೈಬರ್ ಅಪರಾಧಿಗಳಿಗಾಗಿ ಕೆಲಸ ಮಾಡುತ್ತಿರುವ ಭಾರತೀಯ ಏಜೆಂಟ್ ಆಗಿದ್ದಾರೆ ಎಂದು ಸಿಐಡಿಯ ಸೈಬರ್ ಕ್ರೈಂ ಬ್ರಾಂಚ್ ಹೇಳಿದೆ. ಬಂಧಿತ ಸೈಬರ್ ಅಪರಾಧಿಗಳು ಚೀನಾದ ಸಿಂಡಿಕೇಟ್‌ಗಳಿಗೆ ದೇಶದ ವಿವಿಧ ಭಾಗಗಳಿಂದ ಅಕ್ರಮವಾಗಿ ಬ್ಯಾಂಕ್ ಖಾತೆ ತೆರೆದಿದ್ದರು. ಬಂಧಿತರಲ್ಲಿ ಮೂನ್‌ಪೇ, ಡ್ರಾಗನ್‌ಪೇ, ಸೂಪರ್‌ಪೇ ಮತ್ತು ಮಂಗೋಪಾಯಿAಡಿಯಾ ಮುಂತಾದ ಚೀನಾದ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ವಿಶೇಷ ಏಜೆಂಟ್ ಒಬ್ಬರು ಇದ್ದಾರೆ. ತನಿಖೆ ವೇಳೆ ಚೀನಾ ಸಿಂಡಿಕೇಟ್‌ಗೆ ಲಿಂಕ್ ಮಾಡಲಾದ ದೊಡ್ಡ ಪ್ರಮಾಣದ ಬ್ಯಾಂಕ್ ಖಾತೆ ವಿವರಗಳನ್ನು ಹೊಂದಿರುವ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಚಾಟ್‌ಗಳು ಸೇರಿದಂತೆ ಗಮನಾರ್ಹ ಸಂಖ್ಯೆಯ ಡಿಜಿಟಲ್ ಪುರಾವೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.