ಗೋಣಿಕೊಪ್ಪಲು, ಜು.೭: ಹುದಿಕೇರಿ ವಲಯ ಕಾಂಗ್ರೆಸ್, ಕೊಡಗು ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ರಕ್ತನಿಧಿ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹುದಿಕೇರಿಯ ಕೊಡವ ಸಮಾಜದ ಸಭಾಂಗಣದಲ್ಲಿ ಉಚಿತ ಆರೋಗ್ಯ ಹಾಗೂ ತಪಾಸಣೆ ಶಿಬಿರ ನಡೆಯಲಿದೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್ ತಿಳಿಸಿದ್ದಾರೆ.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ತಾ. ೯ರ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಶಿಬಿರವನ್ನು ಆಯೋಜಿಸಲಾಗಿದ್ದು ಶಿಬಿರದಲ್ಲಿ ಅನುಭವಿ ವೈದ್ಯರುಗಳು ತಪಾಸಣೆ ನಡೆಸಲಿದ್ದಾರೆ.
ಶಿಬಿರದಲ್ಲಿ ಉಚಿತ ದಂತ ತಪಾಸಣೆ, ಹಲ್ಲು ಕೀಳುವುದು, ಹಲ್ಲಿನ ಸ್ವಚ್ಚತೆ ಹಾಗೂ ಹಲ್ಲು ಕುಳಿ ತುಂಬುವುದು, ಕೃತಕ ದಂತಪAಕ್ತಿ ನೀಡುವುದು,
(ಮೊದಲ ಪುಟದಿಂದ) ಬಾಯಿಯ ಇತರೆ ಕಾಯಿಲೆಗಳನ್ನು ಪರಿಶೀಲನೆ ನಡೆಸುವುದು, ಉಚಿತ ನೇತ್ರ ತಪಾಸಣೆ ಪರೀಕ್ಷೆ ಮತ್ತು ಚಿಕಿತ್ಸೆ, ಅಸ್ತಮಾ ತಪಾಸಣೆ ಶ್ವಾಸಕೋಶದ ಕ್ಷಮತೆ ಪರೀಕ್ಷೆ, ಕ್ಷಯರೋಗದ ಅರಿವು ಮತ್ತು ಕಫ ಪರೀಕ್ಷೆ, ಉಚಿತ ಬಿಪಿ, ಮತ್ತು ಸಕ್ಕರೆ ಕಾಯಿಲೆ ಪರೀಕ್ಷೆ ಕಾಲಿನ ನರಗಳ ಉರಿಯೂತ ತಪಾಸಣೆ, ರಕ್ತಹೀನತೆ ಪರೀಕ್ಷೆ, ಉಚಿತ ಶ್ರವಣ ಪರೀಕ್ಷೆ ನಡೆಯಲಿದೆ. ಶಿಬಿರದಲ್ಲಿ ಲಭ್ಯವಿರುವ ಸಾಮಾನ್ಯ ಔಷಧಿ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ. ಬಾಬು, ಹುದಿಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂಗುಲAಡ ಸೂರಜ್, ಚಂಗುಲAಡ ಮಧು ಹಾಗೂ ಚೊಟ್ಟೆಯಂಡಮಾಡ ಬಿಪಿನ್ ಉಪಸ್ಥಿತರಿದ್ದರು.