ಸೋಮವಾರಪೇಟೆ,ಜು.೭: ಸಮೀಪದ ನೇರುಗಳಲೆ ಗ್ರಾ.ಪಂ.ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದಲ್ಲಿ ಭಾರೀ ಮಳೆಗೆ ವಾಸದ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದೆ.
ತಣ್ಣೀರುಹಳ್ಳ ಗ್ರಾಮದ ಕೂಲಿ ಕಾರ್ಮಿಕರಾದ ಲಕ್ಷಿö್ಮÃ ರಮೇಶ್ ಅವರಿಗೆ ಸೇರಿದ ವಾಸದ ಮನೆಯ ಒಂದು ಗೋಡೆ ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಕುಸಿದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಕ್ಷಿö್ಮÃ ಅವರ ಮನೆ ತೀರಾ ಶಿಥಿಲಾವಸ್ಥೆಯಲ್ಲಿದೆ. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಲಕ್ಷಿö್ಮÃ ಅವರ ಹೆಸರೂ ಸೇರಿದಂತೆ ೨೧ ಮಂದಿ ಮನೆ ರಹಿತರ ಪಟ್ಟಿಯನ್ನು ಸಂಬAಧಿಸಿದ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದರೂ ಸಹ ಇಡೀ ಪಂಚಾಯಿತಿಗೆ ಕೇವಲ ೧ ಮನೆಯನ್ನು ಮಾತ್ರ ಮಂಜೂರು ಮಾಡಿದ್ದಾರೆ.
ಬೇರೆ ಗ್ರಾಮ ಪಂಚಾಯಿತಿಗಳಿಗೆ ೧೦ ರಿಂದ ೨೦ ಮನೆಗಳನ್ನು ಮಂಜೂರು ಮಾಡಿದ್ದು, ನೇರುಗಳಲೆ ಗ್ರಾಮ ಪಂಚಾಯಿತಿಗೆ ಮಾತ್ರ ಕೇವಲ ೧ ಮನೆ ಮಂಜೂರು ಮಾಡಿರುವುದು ತಾರತಮ್ಯ ನೀತಿಯಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ರಹಿತರ ಸಂಖ್ಯೆ ಹೆಚ್ಚಿದ್ದರೂ ಸಹ ಸರ್ಕಾರದ ಯೋಜನೆಯಡಿ ನೆರವು ಒದಗಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಪ್ರವೀಣ್ ಆರೋಪಿಸಿದ್ದಾರೆ.