ಶನಿವಾರಸಂತೆ, ಜು. ೭: ಪಟ್ಟಣದ ತ್ಯಾಗರಾಜ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆ ವತಿಯಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸ ಲಾಯಿತು.

ಯೂತ್ ಫಾರ್ ಸೇವಾ ಸಂಸ್ಥೆ ಮುಖ್ಯಸ್ಥೆö ಕಾವ್ಯ ಅವರ ನೇತೃತ್ವ ದಲ್ಲಿ ಸಂಸ್ಥೆ ಪ್ರತಿನಿಧಿ ಹಾರೆ ಹೊಸೂರು ಗ್ರಾಮದ ಮೊಯ್ದು ಅವರು ಶಾಲೆಯ ೧ ರಿಂದ ೭ ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿ ಗಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಪೌಚ್, ಇತ್ಯಾದಿ ಸಾಮಗ್ರಿಗಳನ್ನು ವಿತರಿಸಿ ದರು. ಈ ಸಂದರ್ಭ ಉದ್ಯಮಿ ಮಣಿಯಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಕೆ. ದಿನೇಶ್, ಮುಖ್ಯಶಿಕ್ಷಕ ಪುಟ್ಟಸ್ವಾಮಿ, ಶಿಕ್ಷಕರಾದ ರಾಜಪ್ಪ, ಭೋಜಪ್ಪ, ಲತಾಮಣಿ, ಸುನಂದಾ, ಸುಧಾ ಹಾಗೂ ಧನು ಹಾಜರಿದ್ದರು.