ಮಡಿಕೇರಿ, ಜು. ೭: ಕೊಡವಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ, ಆಂತರಿಕ ಸ್ವಯಂ ನಿರ್ಣಯ ಹಕ್ಕು ಸೇರಿದಂತೆ ೨೦೨೬ರ ರಾಷ್ಟಿçÃಯ ಜನಗಣತಿಯಲ್ಲಿ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ನಾಪೋಕ್ಲುವಿನಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಿತು. ೨೦೨೫-೨೬ರ ರಾಷ್ಟಿçÃಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಮೂಲಕ ಕೊಡವರ ದಾಖಲಿಕರಣ, ೨೦೨೬ರ ಕ್ಷೇತ್ರ ಪುನರ್ ವಿಂಗಡಣೆಯು ಸೇರಿದಂತೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಪಟ್ಟಿ ಸೇರಿದಂತೆ ಸರ್ವಾಂಗೀಣ ಸಂವಿಧಾನಿಕ ಸಬಲೀಕರಣಕ್ಕೆ ಮತ್ತು ವಿಶೇಷ ಹೆಗ್ಗುರುತಿನ ಖಾತರಿಗೆ ಬುನಾದಿಯಾಗಲಿದ್ದು, ಜಾತಿಗಣತಿ ಕೊಡವ ಲ್ಯಾಂಡ್‌ನಲ್ಲಿ ಆದಿಮಸಂಜಾತ ಕೊಡವರ ಚಾರಿತ್ರಿಕ ಮುಂದುವರಿಕೆಗೆ ಚಿರಸ್ಥಾಯಿ ಆಗಲು ಕಾರಣವಾಗಲಿದೆ. ಇದರ ಹಳಿ ತಪ್ಪದಂತೆ ಕೊಡವರು ಎಚ್ಚರ ವಹಿಸಬೇಕೆಂದು ನಾಚಪ್ಪ ಕರೆ ನೀಡಿದರು.
ಬೆಳಿಗ್ಗೆ ೧೦.೩೦ ಗಂಟೆಗೆ ನಾಪೋಕ್ಲುವಿನಲ್ಲಿ ಮಾನವ ಸರಪಳಿ ನಿರ್ಮಿಸಿ ವಿವಿಧ ಸಂವಿಧಾನಿಕ ಹಕ್ಕೊತ್ತಾಯಗಳ ಕುರಿತು ಹಕ್ಕೊತ್ತಾಯ ಮಂಡಿಸಲಾಯಿತು. ಸಿಎನ್‌ಸಿಯು ಗುರಿಯಕಡೆ ನಿಧಾನವಾಗಿ ಎಲ್ಲಿಯೂ ನಿಲ್ಲದೆ ಅವಿರತವಾಗಿ ಸಾಗುತ್ತಿದೆ. ಸಿಎನ್‌ಸಿಯ ಶಾಂತಿಯುತ ಹಾಗೂ ಸುದೀರ್ಘ ಸಂವಿಧಾನಿಕ ಹಕ್ಕೊತ್ತಾಯ ದ ನಡೆಗೆ ಬೆಂಬಲಿಸಬೇಕೆAದು ಎನ್.ಯು.ನಾಚಪ್ಪ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅಪ್ಪಚ್ಚಿರ ರೀನಾ ರಮ್ಮಿ, ನಂದಿನೆರವAಡ ರೇಖಾ ನಾಚಪ್ಪ, ಬಿದ್ದಾಟಂಡ ಮಮತ ಚಿಣ್ಣಪ್ಪ, ಕಲಿಯಂಡ ಪ್ರಕಾಶ್, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕುಲ್ಲೇಟಿರ ಅರುಣಾ ಬೇಬ, ಮಣವಟ್ಟಿರ ಶಿವಣಿ, ಕಾಟುಮಣಿಯಂಡ ಉಮೇಶ್, ಅರೆಯಡ ಗಿರೀಶ್, ಬೊಳ್ಳಚೆಟ್ಟಿರ ಸುರೇಶ್, ಕೊಡಂದೇರ ಬಾಂಡ್ ಗಣಪತಿ, ಕೇಟೋಳಿರ ಹರೀಶ್ ಪೂವಯ್ಯ, ಕೋಡಿಮಣಿಯಂಡ ಮಣಿ, ಕಂಡ್ಯೋಳAಡ ರಮೇಶ್, ಅರೆಯಡ ರತ್ನ, ಕರವಂಡ ಲವ, ಕುಟ್ಟಂಜೆಟ್ಟಿರ ಶ್ಯಾಮ್, ಮಣವಟ್ಟಿರ ಜಗ್ಗು, ಕುಲ್ಲೇಟಿರ ಅಜಿತ್ ನಾಣಯ್ಯ, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ಪ್ರಕಾಶ್, ಅಪ್ಪಾರಂಡ ವಿಜು, ಕಂಙAಡ ಜಾಲಿ, ಕುಲ್ಲೇಟಿರ ದೇವಿ, ಕನ್ನಂಬಿರ ಸುಧಿ, ಅರೆಯಡ ರಘು, ಅಜ್ಜೆಟ್ಟಿರ ಬೋಪಣ್ಣ, ಕೇಲೇಟಿರ ಮಧು, ಅಜ್ಜೆಟ್ಟಿರ ಶಂಭು, ಕುಂಡ್ಯೋಳAಡ ವಿಶು, ಕೊಂಡಿರ ರಾಜಪ್ಪ, ಬೊಪ್ಪಂಡ ಬೆಲ್ಲು, ಬಿದ್ದಾಟಂಡ ಶಿವಾಜಿ, ಕಿಕ್ಕೇರಿಯಂಡ ಕುಮಾರ್, ಬಿದ್ದಾಟಂಡ ಡಿಕ್ಕಿ, ನಿಡುಮಂಡ ಕೃತಿ, ಪುಲ್ಲೇರ ವಿಠಲ, ಅಪ್ಪಚ್ಚಿರ ಮಹೇಶ್, ಕಲಿಯಂಡ ಹ್ಯಾರಿ, ಶಿಬಚಾಳಿಯಂಡ ಅಂಬಿ, ಕಲಿಯಂಡ ಕೌಶಿ, ಅರೆಯಡ ಅಶೋಕ್, ನಾಯಕಂಡ ದೀಪು, ಮಣವಟ್ಟೀರ ಡಿಕ್ಕ, ಕೊಂಡಿರ ಕೀರ್ತನ್, ಕೇಲೇಟಿರ ಸಾಬು, ಚೋಕಿರ ಪ್ರಭು, ಬೊಟ್ಟೋಳಂಡ ರಮೇಶ್, ನಾಯಂಡ ಕುಂಞಣ್ಣ, ಶಿವಚಾಳಿಯಂಡ ಜಗ, ಕಲಿಯಂಡ ವಿಠಲ, ಬೊಪ್ಪಂಡ ಜಪ್ಪು, ಕೊಂಡಿರ ಪಳಂಗಪ್ಪ, ಶಿವಚಾಳಿಯಂಡ ಡಾಲು, ಪುಲ್ಲೇರ ಹ್ಯಾರಿ, ಚೋಕಿರ ಸಜಿತ್, ಕೋಡಿಮಣಿಯಂಡ ರಾಜಾ, ಮುಕ್ಕಾಟಿರ ಸುತನ್, ಕೊಂಡಿರ ಮೋಹನ್, ಅರೆಯಡ ಕಿರಣ್, ಅರೆಯಡ ದೇವಯ್ಯ, ಅಪ್ಪನೆರವಂಡ ಕಿರಣ್, ಅಪ್ಪನೆರವಂಡ ರನ್ನು, ಮಣವಟ್ಟಿರ ಸ್ವರೂಪ್, ಕೊಂಡಿರ ತಮುಣಿ, ಮೂವೇರ ಪಟ್ಟು, ಕೇಲೇಟಿರ ರಮೇಶ್, ಚಿಯಕ್‌ಪೂವಂಡ ಸತೀಶ್, ಅಪ್ಪನೆರವಂಡ ಕಿರಣ್, ಪಟ್ರಪಂಡ ನಿರನ್, ಕಾಟುಮಣಿಯಂಡ ಕಾರ್ತಿಕ್, ಅಂಜಪರವAಡ ರಂಜು, ಮೂವೆರ ಬಿನ್ನು, ಬಾದುಮಂಡ ನಾಣಯ್ಯ, ಅಂಜಪರವAಡ ರಘು, ಕಂಙAಡ ರಾಜು, ನಾಯಕಂಡ ಕುಮಾರ್, ಮುಂಡAಡ ಶಾಂತ, ಬಾದುಮಂಡ ವಿಹಾನ್ ಉತ್ತಪ್ಪ, ಬಾದುಮಂಡ ವಿರಾನ್, ಕರವಂಡ ಬೆಲ್ಲು, ಬೊಟ್ಟೋಳಂಡ ಸುಜು, ಚಿಯಕ್‌ಪೂವಂಡ ಸಚಿನ್, ಅಜ್ಜೆಟ್ಟೀರ ರಾಜಾ, ಬದ್ದಂಜೆಟ್ಟಿರ ಭೀಮಯ್ಯ, ಕಲಿಯಾಟಂಡ ರಮೇಶ್, ಚಂಗೇಟ್ಟಿರ ಶಂಭು ಭಾಗವಹಿಸಿದ್ದರು.
ಮುಂದಿನ ಮಾನವ ಸರಪಳಿ ಕಾರ್ಯಕ್ರಮ ತಾ.೧೯ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಮಾದಾಪುರದಲ್ಲಿ ನಡೆಯಲಿದೆ.