ಕೊಯನಾಡು, ಜು. ೭: ಕೊಯನಾಡು ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ ಖತೀಬ್ ಹಾಗೂ ಮದ್ರಸ ಅಧ್ಯಾಪಕರಾಗಿ ಕಳೆದ ಒಂದೂವರೆ ವರ್ಷ ಸೇವೆ ಸಲ್ಲಿಸಿ ಮಂಗಳೂರು ತಖ್ವಾ ಜುಮಾ ಮಸೀದಿಯ ಪ್ರಧಾನ ಖತೀಬರಾಗಿ ನಿಯುಕ್ತಗೊಂಡ ಮಹಮ್ಮದ್ ಸಖಾಫಿ ಅಲ್ ಹಿಕಮಿ ಅವರನ್ನು ಜಮಾಅತ್ ಸಮಿತಿ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಹಾಗೂ ಸುಬುಲು ಸ್ಸಲಾಂ ಮದ್ರಸ ವತಿಯಿಂದ ಬೀಳ್ಕೊಡಲಾಯಿತು ಸಮಾರಂಭದಲ್ಲಿ ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ, ಜಮಾಅತ್ ಸಮಿತಿ ಅಧ್ಯಕ್ಷ ಹಾಜಿ ಎಸ್. ಮೊಯಿದಿನ್ ಕುಂಞೆ, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಹನೀಫ್ ಎಸ್.ಪಿ, ಮಾಜಿ ಅಧ್ಯಕ್ಷರುಗಳಾದ ಹಾಜಿ ಅಲವಿ ಕುಟ್ಟಿ, ಅಬ್ದುಲ್ ರಝಾಕ್ ಎಸ್.ಎ, ಅಬ್ದುಲ್ ರಹಿಮಾನ್ ಎಸ್.ಪಿ, ಉಪಾಧ್ಯಕ್ಷ ಉಸ್ಮಾನ್ ಎಂ ಹೆಚ್, ಪ್ರಧಾನ ಕಾರ್ಯದರ್ಶಿ ಮುನೀರ್ ಪಿ.ಎಂ ಹಾಗೂ ಜಮಾಅತ್ ಸದಸ್ಯರು, ಪೋಷಕರು, ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.