ಸೋಮವಾರಪೇಟೆ, ಜು. ೮: ಕೇಂದ್ರೀಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವ ಗ್ರಾಮಕ್ಕೆ ಆಗಮಿಸಿದ ಯೋಧರೋರ್ವರಿಗೆ ಭವ್ಯ ಸ್ವಾಗತ ನೀಡಿ, ನಂತರ ಸನ್ಮಾನಿಸಿ ಪೌರ ಕೃತಜ್ಞತೆ ಸಲ್ಲಿಸಿದ ಕಾರ್ಯಕ್ರಮ ಆಲೂರು-ಸಿದ್ದಾಪುರ ಸಮೀಪದ ಮೈಲಾತ್ಪುರ ಗ್ರಾಮದಲ್ಲಿ ನಡೆಯಿತು.

ತಾಲೂಕಿನ ಆಲೂರು-ಸಿದ್ದಾಪುರ ಸಮೀಪದ ಮೈಲಾತ್ಪುರ ಗ್ರಾಮದ ನಿವಾಸಿ ಮಂಜುನಾಥ್ ಅವರು ಕೇಂದ್ರೀಯ ಮೀಸಲು ಪಡೆಯ ಮೂಲಕ ರಾಷ್ಟç ರಕ್ಷಣೆಗೆ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಸುದೀರ್ಘ ೩೭ವರ್ಷಗಳ ಕಾಲ ಸೇವೆ ಸಲ್ಲಿಸಿ, ವಯೋಸಹಜ ನಿವೃತ್ತಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಸಂದರ್ಭ ಗ್ರಾಮಸ್ಥರು ಹಾಗೂ ಕುಟುಂಬಸ್ಥರಿAದ ಅಭೂತಪೂರ್ವ ಸ್ವಾಗತ, ಅಭಿನಂದನೆ, ಸನ್ಮಾನ, ಗೌರವಾದರಗಳು ಲಭಿಸಿದವು.

ಇವರೊಂದಿಗೆ ಅಕ್ಕಪಕ್ಕದ ಗ್ರಾಮದ ನಿವೃತ್ತ ಯೋಧರನ್ನೂ ಇದೇ ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು. ಆ ಮೂಲಕ ಜನಸಾಮಾನ್ಯರಲ್ಲಿ ದೇಶದ ಸೈನಿಕರ ಬಗ್ಗೆ ಇರುವ ಗೌರವ ಹಾಗೂ ಪೂಜನೀಯ ಭಾವನೆಗಳು ವ್ಯಕ್ತಗೊಂಡವು. ಇದು ಕಾರ್ಯಕ್ರಮದ ಉದ್ದಕ್ಕೂ ಸಾಕ್ಷಿಯಾಯಿತು.

ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಮಂಜುನಾಥ್ ಅವರು, ರಾಷ್ಟç ರಕ್ಷಣೆಯ ಸೇವೆ ಎಲ್ಲರಿಗೂ ಸಿಗುವಂತಹದ್ದಲ್ಲ; ಆದರೆ ನನಗೆ ಅಂತಹ ಅವಕಾಶ ಸಿಕ್ಕಿದ್ದು, ಭಾರತಾಂಬೆಯ ಸೇವೆ ಮಾಡಿದ ಸಾರ್ಥಕತೆ ತನಗಿದೆ; ಇದು ಜೀವನದ ಹೆಮ್ಮೆ ಎಂದರು.

೩೭ ವರ್ಷಗಳಲ್ಲಿ ಹಲವು ಬಾರಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗಿತ್ತು.

ಆದರೆ ದೇಶಾಭಿಮಾನಿಗಳ ಹಾರೈಕೆಯಿಂದ ಬದುಕಿ ಬರುವಂತಾಯಿತು. ದೇಶ ಸೇವೆಗೆ ಈಗಿನ ಯುವ ಜನಾಂಗ ಮುಂದೆ ಬರಬೇಕು. ರಾಷ್ಟç ಭದ್ರವಾಗಿದ್ದರೆ ಮಾತ್ರ ಎಲ್ಲರ ಜೀವನ ಸುಭದ್ರವಾಗಿರುತ್ತದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಈ ದೇಶದ ಸೈನಿಕರು ರಕ್ಷಣೆಯಲ್ಲಿ ನಿಂತಿದ್ದ ರಿಂದಲೇ ನಾವುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಆದ್ದರಿಂದ ನಾವು ಸೈನಿಕರನ್ನು ಗೌರವ ಭಾವನೆಯಿಂದ ಕಾಣಬೇಕು ಎಂದರು.

ಮೈಲಾತ್ಪುರದ ಸಣ್ಣೇಗೌಡರ ಕುಟುಂಬ ರಾಷ್ಟç ರಕ್ಷಣೆಗೆ ಮಂಜುನಾಥ್ ಹಾಗೂ ಧರ್ಮದ ರಕ್ಷಣೆಗೆ ಶಿಡಿಗಳಲೆ ಮಠದ ಸ್ವಾಮೀಜಿಯಂತಹ ಎರಡು ಸೈನಿಕರನ್ನು ಸಮಾಜಕ್ಕೆ ನೀಡಿದ್ದಾರೆ. ದೇಶದ ಸೈನಿಕರ ಬಗ್ಗೆ ಹಾಗೂ ಅನ್ನದಾತ ರೈತರ ಬಗ್ಗೆ ನಾವು ಗೌರವ ಭಾವನೆ ಹೊಂದಿರಬೇಕು ಎಂದರು.

ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ ಮಾತನಾಡಿ, ಅನ್ನದಾತ ರೈತರು ಹಾಗೂ ರಾಷ್ಟç ರಕ್ಷಣೆದಾತ ಸೈನಿಕರು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದರು. ಇಬ್ಬರಿಗೂ ಯಾವುದೇ ಚ್ಯುತಿ ಬಾರದಂತೆ ಗೌರವ ಸಲ್ಲಬೇಕೆಂದರು.

ಇದೇ ಸಂದರ್ಭ ನಿವೃತ್ತ ಸೈನಿಕರುಗಳಾದ ಮಂಜುನಾಥ್ ಸೇರಿದಂತೆ ಅಂಕನಹಳ್ಳಿ ಮಹೇಶ್, ಸೋಮಣ್ಣ, ಶೆಟ್ಟಿಹಳ್ಳಿ ಜಗದೀಶ್ ಹಾಗೂ ನಿವೃತ್ತ ಶಿಕ್ಷಕರಾದ ಬಡುಬನ ಹಳ್ಳಿಯ ಷಣ್ಮುಖಯ್ಯ ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆಯೋಜಕ ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಸಪ್ಪ, ಶಿಕ್ಷಕರುಗಳಾದ ಕುಮಾರ್ ಹಾಗೂ ಸುರೇಶ್ ಉಪಸ್ಥಿತರಿದ್ದರು.