ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಜು. ೮ : ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ರಾಷ್ಟç ಬ್ರೆಜಿಲ್‌ನಲ್ಲಿ ಹಿಮಪಾತದ ಕಾರಣದಿಂದಾಗಿ ಲಕ್ಷಾಂತರ ಎಕರೆ ತೋಟಗಳೇ ನಾಶವಾಗಿ ಅಂತರರಾಷ್ಟಿçÃಯ ಮಾರುಕಟ್ಟೆಗೆ ಕಾಫಿಯ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆ ಆದ ಕಾರಣದಿಂದಾಗಿ ಭಾರತದಲ್ಲಿ ಕಾಫಿ ದರ ಕಳೆದ ೮-೧೦ ತಿಂಗಳುಗಳಿAದ ಗಣನೀಯ ಏರಿಕೆ ದಾಖಲಿಸಿತ್ತು. ಈ ನಡುವೆ ಬ್ರೆಜಿಲ್‌ನಲ್ಲಿ ಕಾಫಿ ಕೊಯ್ಲು ನಡೆದಿರುವ ಬೆನ್ನಲ್ಲೇ ಭಾರತೀಯ ಕಾಫಿ ದರ ಕುಸಿತಗೊಳ್ಳುತ್ತಿದೆ.

ಮಾರ್ಚ್ನಿಂದ ಕಾಫಿ ದರ ಕುಸಿಯಲು ಆರಂಭಿಸಿದ್ದು ರೊಬಸ್ಟಾ ಕಾಫಿ ದರಗಳು ಗಣನೀಯವಾಗಿ ಇಳಿಕೆ ದಾಖಲಿಸಿವೆ. ಅರೇಬಿಕಾ ಮತ್ತು ರೊಬಸ್ಟಾ ಪಾರ್ಚ್ಮೆಂಟ್ ಕಾಫಿ ದರ ೫೦ ಕೆಜಿ ಚೀಲಕ್ಕೆ ಕ್ರಮವಾಗಿ ೨೯ ಸಾವಿರ ಮತ್ತು ೨೬ ಸಾವಿರ ರೂಪಾಯಿಗಳ ವರೆಗೂ ತಲುಪಿತ್ತು. ಒಂದು ಹಂತದಲ್ಲಿ ಕಾಫಿಯ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ರೊಬಸ್ಟಾ ಪಾರ್ಚ್ ಮೆಂಟ್ ಕಾಫಿ ದರ ಅರೇಬಿಕಾ ಕಾಫಿ ದರವನ್ನೂ ಹಿಂದಿಕ್ಕಿತ್ತು. ಇದೀಗ ರೊಬಸ್ಟಾ ಪಾರ್ಚ್ ಮೆಂಟ್ ಕಾಫಿ ದರ ಗಣನೀಯ ಹೊಡೆತ ಅನುಭವಿಸಿದ್ದು ಮಂಗಳವಾರ ವೈನಾಡ್ ಚಿಕ್ಕಮಗಳೂರು ಹಾಗೂ ಕೊಡಗಿನ ಮಾರುಕಟ್ಟೆಗಳಲ್ಲಿ ೫೦ ಕೆಜಿ ಚೀಲದ ದರ ೧೬ ರಿಂದ ೧೭ ಸಾವಿರ ರೂಪಾಯಿಗಳವರೆಗೆ ಇತ್ತು. ರೊಬಸ್ಟಾ ಚೆರಿ ದರ ೮ ರಿಂದ ೯ ಸಾವಿರ ರೂಪಾಯಿಗಳವರೆಗೂ ಇತ್ತು.

ಅರೇಬಿಕಾ ಪಾರ್ಚ್ಮೆಂಟ್ ಹಾಗೂ ಚೆರಿ ದರ ಕುಸಿತ ದಾಖಲಿಸಿದ್ದರೂ ರೋಬಸ್ಟಾ ಕಾಫಿ ದರದಷ್ಟು ಕುಸಿದಿಲ್ಲ. ಅರೇಬಿಕಾ ಚೆರಿ ೫೦ ಕೆಜಿ ಚೀಲಕ್ಕೆ ೧೨ ರಿಂದ ೧೨,೮೦೦ ಹಾಗೂ ಪಾರ್ಚ್ಮೆಂಟ್ ದರ ೨೪ ರಿಂದ ೨೫ ಸಾವಿರ ರೂಪಾಯಿಗಳವರೆಗೆ ಇತ್ತು. ಜಾಗತಿಕ ಕಾಫಿ ದೈತ್ಯ ಬ್ರೆಜಿಲ್ ನಲ್ಲಿ ಕಾಫಿ ಕೊಯ್ಲು ಪ್ರಗತಿಯಲ್ಲಿದ್ದು ಈಗಾಗಲೇ ಶೇಕಡಾ ೫೦ ರಷ್ಟು ಕೊಯ್ಲು ಮುಗಿದಿದೆ. ಬ್ರೆಜಿಲ್ ಕಾಫಿ ಮಾರುಕಟ್ಟೆಗೆ ಆಗಮಿಸಿರುವ ಕಾರಣ ದರ ಕುಸಿತ ಆರಂಭಗೊAಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಭಾರತವು ವಾರ್ಷಿಕವಾಗಿ ಕೇವಲ ೫ ಮಿಲಿಯನ್ ಕಾಫಿ ಚೀಲಗಳನ್ನು ಉತ್ಪಾದಿಸುತ್ತಿದ್ದು ಬ್ರೆಜಿಲ್ ಸುಮಾರು ೫೬ ಮಿಲಿಯನ್ ಚೀಲಗಳಷ್ಟು ಕೊಡುಗೆ ನೀಡುತ್ತದೆ, ಇದು ಜಾಗತಿಕ ಉತ್ಪಾದನೆಯ ಸುಮಾರು ಮೂರನೇ ಒಂದು ಭಾಗವಾಗಿದೆ. ಬ್ರೆಜಿಲ್‌ನ ಕಾಫಿ ವಲಯದಲ್ಲಿನ ಯಾವುದೇ ಅಭಿವೃದ್ಧಿಯು ಜಾಗತಿಕ ಬೆಲೆಗಳ ಮೇಲೆ, ವಿಶೇಷವಾಗಿ ಭಾರತದಲ್ಲಿ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕಾಫಿ ವ್ಯವಸಾಯದಲ್ಲಿ ಸುಮಾರು ಶೇಕಡಾ ೩೦ ರಷ್ಟು ಉತ್ಪಾದನಾ ವೆಚ್ಚ ಕೊಯ್ಲಿನ ಸಮಯದಲ್ಲಿ ಬರುತ್ತದೆ. ಬ್ರೆಜಿಲ್ ರೈತರು ವೆಚ್ಚಗಳನ್ನು ಸರಿದೂಗಿಸಲು ಆರಂಭಿಕ ಬೆಳೆಗಳನ್ನು ಮಾರಾಟ ಮಾಡಲು ಮುಂದಾಗುತ್ತಾರೆ ಉಳಿದವುಗಳನ್ನು ಉತ್ತಮ ಬೆಲೆಗಾಗಿ ದಾಸ್ತಾನು ಮಾಡಿಕೊಳ್ಳುತ್ತಾರೆ. ಕಳೆದ ವರ್ಷದ ಬೆಲೆ ಏರಿಕೆಗೆ ಬ್ರೆಜಿಲ್‌ನಲ್ಲಿ ಕಾಫಿ ಉತ್ಪಾದನೆಯ ಕೊರತೆಯ ಭಯ ಕಾರಣ ಎಂದು ಉದ್ಯಮದ ತಜ್ಞರು ಹೇಳುತ್ತಾರೆ, ಆದರೆ ಈ ವರ್ಷ ಸುಧಾರಿತ ಇಳುವರಿ ಮತ್ತು ಅನುಕೂಲಕರ ಹವಾಮಾನದೊಂದಿಗೆ, ಬ್ರೆಜಿಲ್ ಮತ್ತು ದಕ್ಷಿಣ ಭಾರತದ ಕಾಫಿ ಉತ್ಪಾದನೆ ಏರಿಕೆಯಾಗುವ ನಿರೀಕ್ಷೆಯಿದೆ.

ಇದಲ್ಲದೆ, ಭಾರತದ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಾದ ವಯನಾಡ್, ಚಿಕ್ಕಮಗಳೂರು ಮತ್ತು ಕೊಡಗಿನ ಹವಾಮಾನ ಪರಿಸ್ಥಿತಿಗಳು ಬೆಲೆ ಕುಸಿತಕ್ಕೆ ಕಾರಣವಾಗಿವೆ, ತಜ್ಞರು ಮುಂದಿನ ಋತುವಿನಲ್ಲಿ ಉತ್ತಮ ಫಸಲನ್ನು ನಿರೀಕ್ಷಿಸುತ್ತಿದ್ದಾರೆ. ಕಾಫಿ ಮಂಡಳಿಯ ಜಂಟಿ ನಿರ್ದೇಶಕ (ವಿಸ್ತರಣೆ) ಡಾ. ಎಂ. ಕರುತ್ತಮಣಿ ಮಾತನಾಡಿ ದೇಶೀಯ ಉತ್ಪಾದನಾ ಮುನ್ಸೂಚನೆಗಳು ಇಳಿಮುಖ ಒತ್ತಡಕ್ಕೆ ಕಾರಣವಾಗಿವೆ ಎಂದು ಹೇಳಿದರು. "ಹೆಚ್ಚಿನ ಕಾಫಿ ಪ್ರದೇಶಗಳು ಉತ್ತಮವಾದ ಕೊಯ್ಲಿಗೆ ಸಜ್ಜಾಗಿವೆ; ಈ ವರ್ಷ ಹೂಬಿಡುವ ಮೊದಲು ಮತ್ತು ಹೂಬಿಡುವ ನಂತರ ಮಳೆ ಪರಿಪೂರ್ಣವಾಗಿದೆ" ಎಂದು ಅವರು ಹೇಳಿದರು. ವಯನಾಡಿನಲ್ಲಿಯೇ ಸುಮಾರು ೬೦,೦೦೦ ಮೆಟ್ರಿಕ್ ಟನ್‌ಗೂ ಹೆಚ್ಚಾಗಿ ರೋಬಸ್ಟಾ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ಕರುತ್ತಮಣಿ ಹೇಳಿದರು. ಆದರೆ ಅವರು ಮತ್ತಷ್ಟು ಬೆಲೆ ಕುಸಿತ ಆಗಲಾರದೆಂದು ಅಭಿಪ್ರಾಯಪಟ್ಟರು. ಬ್ರೆಜಿಲ್‌ನಲ್ಲಿ ಬೆಳೆಗಾರರು ಈಗ ಸ್ವಲ್ಪಾಂಶ ಕಾಫಿ ಮಾರುಕಟ್ಟೆಗೆ ಕಳಿಸಿ ಇತರ ದಾಸ್ತಾನನ್ನು ಬೆಲೆ ಏರಿಕೆ ಆಗಲಿ ಎಂದು ಇರಿಸುವುದರಿಂದ ಕಾಫಿ ಬೆಲೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಕುಸಿತ ಸಾದ್ಯತೆ ಕಡಿಮೆ ಎಂದು ಅವರು ಹೇಳಿದರು.