ಸಿದ್ದಾಪುರ, ಜು. ೮: ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮೀನು ಕೊಲ್ಲಿ ಶಾಖೆಯ ವತಿಯಿಂದ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನೇತೃತ್ವದಲ್ಲಿ ಶಾಲೆಯ ಆವರಣದೊಳಗೆ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಯಿತು. ಸಚಿನ್ ಮಾತನಾಡಿ, ಭಾರತ ದೇಶದಲ್ಲಿ ೧೯೫೦ ರಲ್ಲಿ ಆರಂಭಿಸಿದ ವಾರ್ಷಿಕ ಗಿಡ ನೆಡುವ ಚಳವಳಿ ಇಂದು ರಾಷ್ಟಿçÃಯ ಮಟ್ಟದಲ್ಲಿ ಮಹತ್ವವನ್ನು ಗಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ವನಮಹೋತ್ಸವ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅರಣ್ಯ ಸಿಬ್ಬಂದಿಗಳು ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮುಖ್ಯ ಶಿಕ್ಷಕಿ ರಮ ಹಾಗೂ ಶಿಕ್ಷಕರು ಹಾಜರಿದ್ದರು.