ವೀರಾಜಪೇಟೆ, ಜು. ೮: ಇಲ್ಲಿನ ತಾಲೂಕು ಮೈದಾನ ಬಳಿ ಇರುವ ರೋಟರಿ ಸಭಾಂಗಣದಲ್ಲಿ ವೀರಾಜಪೇಟೆ ರೋಟರಿ ಕ್ಲಬ್ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಪದಗ್ರಹಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉತ್ತರ ಕನ್ನಡದ ಶಿರಸಿಯ ರೋಟರಿ ಸದಸ್ಯ ಕುಲಪತಿ ಡಾ. ದಿನೇಶ್ ಹೆಗ್ಡೆ ಅವರು ಮಾತನಾಡಿ, ರೋಟರಿ ಸಂಸ್ಥೆ ಒಂದು ದೊಡ್ಡ ಸಾಗರ, ಈ ಸಾಗರದಲ್ಲಿ ವಿಶ್ವದಾದ್ಯಂತ ಸುಮಾರು ೨೦೦೭ ಕ್ಲಬ್ಗಳು ಸುಮಾರು ಹದಿನಾಲ್ಕು ಲಕ್ಷ ಸದಸ್ಯರನ್ನು ಹೊಂದಿದೆ, ೧೯೬೧ ರಲ್ಲಿ ಆರಂಭಗೊAಡ ಸಂಸ್ಥೆ ಇಂದಿನವರೆಗೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನೂತನ ಅಧ್ಯಕ್ಷರಿಗೆ ಗುರಿ ಇರಬೇಕು, ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಮುಂದುವರಿಯಬೇಕು. ನಿರ್ಗಮಿತ ಅದ್ಯಕ್ಷರ ಪಾತ್ರ ಬಹಳ ಮುಖ್ಯ, ಹಿರಿಯರ ಪ್ರೋತ್ಸಾಹ ಇರುತ್ತದೆ. ಸೂಚನೆಗಳನ್ನು ಪಡೆದು, ಉತ್ತಮ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಿ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರೋಟರಿ ಸದಸ್ಯೆ ಡಾ. ಸುಮನ್ ಮಾತನಾಡಿ ಸ್ವಾರ್ಥ ಬಿಟ್ಟು ಸೇವೆ ಮಾಡಬೇಕು, ಸಮಾಜ ಸೇವೆ ಕರ್ತವ್ಯ ಎಂದು ತಿಳಿದುಕೊಂಡು ಮಾಡಬೇಕು. ನಿಜವಾದ ರೋಟರಿ ಸದಸ್ಯರು ಪಾರದರ್ಶಕವಾಗಿರುತ್ತಾರೆ, ನಿಮ್ಮ ತನವನ್ನು ಹಿಂದಿಟ್ಟು ರೋಟರಿ ತನವನ್ನು ಮುಂದಕ್ಕೆ ತೋರಿಸಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನೂತನ ಅಧ್ಯಕ್ಷ ಬಿ.ಬಿ. ಮಾದಪ್ಪ ಮಾತನಾಡಿ, ಮುಂದಿನ ನನ್ನ ಅವಧಿಯಲ್ಲಿ ಉತ್ತಮ ಕಾರ್ಯಕ್ರಮ ಗಳನ್ನು ಆಯೋಜಿಸುವ ಗುರಿ ಹೊಂದಲಾಗಿದೆ. ನಮ್ಮ ತಂಡವು ಉತ್ತಮ ಸಮಾಜಮುಖಿ ಕಾರ್ಯ ಗಳನ್ನು ನಿರ್ವಹಿಸಲು ತಯಾರಾಗಿದೆ ಎಂದು ತಿಳಿಸಿದರು. ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಿ.ಬಿ. ಮಾದಪ್ಪ, ಉಪಾಧ್ಯಕ್ಷರಾಗಿ ಟಿ.ಎನ್. ಸರೋಜ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಪೂದ್ರಿಮಾಡ ಗಗನ್ ಗಣಪತಿ, ಖಜಾಂಚಿಯಾಗಿ ಟಿ.ಎನ್. ಭರತ್ ರಾಂ ರೈ, ಸೇರಿದಂತೆ ಹಲವರು ಆಯ್ಕೆಯಾಗಿದ್ದು, ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು.