ವೀರಾಜಪೇಟೆ, ಜು. ೮ : ವೀರಾಜಪೇಟೆ ನಗರದ ಒಂದನೇ ವಾರ್ಡಿನ ಶಾಂತ ಚಿತ್ರಮಂದಿರ ಬಳಿ, ನಿರ್ಮಿತಿ ಕೇಂದ್ರದ ಮೂಲಕ ೧೦ ಲಕ್ಷ ರೂ. ವೆಚ್ಚದಲ್ಲಿ ಶಾಸಕರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಶುದ್ಧ ಕುಡಿಯುವ ನೀರು ಪ್ರತಿಯೊಬ್ಬನ ಅವಶ್ಯಕತೆಯಾಗಿದ್ದು ಜನರು ಸಹ ಮಿತವಾಗಿ ನೀರನ್ನು ಬಳಸಿ. ಈ ಘಟಕವು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿಗಲಿದೆ, ಇಲ್ಲಿನ ಜನರಿಗೆ ಇದರ ಉಪಯೋಗವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಪುರಸಭೆ ಸದಸ್ಯರಾದ ಅಬ್ದುಲ್ ಜಲೀಲ್, ಮಹಮ್ಮದ್ ರಾಫಿ, ಜೂನ ಸುನಿತಾ, ಸುಭಾಷ್ ಮಹದೇವ, ಪೂರ್ಣಿಮಾ, ರಜನಿಕಾಂತ್, ಪ್ರಥ್ವಿನಾಥ್, ನಾಮ ನಿರ್ದೇಶನ ಸದಸ್ಯರಾದ ಸಿ.ಬಿ. ರವಿ, ಅತೀಫ್ ಮನ್ನ, ಶಭರೀಶ್ ಶೆಟ್ಟಿ, ದಿನೇಶ್, ಜಿ.ಜಿ. ಮೋಹನ್, ಶಾಹುಲ್ ಹಮೀದ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು, ಸಂತ ಅನ್ನಮ್ಮ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಹಾಜರಿದ್ದರು.