ಶ್ರೀಮಂಗಲ, ಜು. ೧೧: ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದ ಅಜ್ಜಮಾಡ ಕಟ್ಟಿ ಮಂದಯ್ಯ ಅವರ ಮನೆಯ ಸಮೀಪದ ರಸ್ತೆಯಲ್ಲಿ ಇರುವ ಬಸ್ಸು ತಂಗುದಾಣ ಮೇಲ್ಛಾವಣಿಯ ಶೀಟು ಗಾಳಿ, ಮಳೆಗೆ ಹಾರಿಹೋಗಿದೆ. ಇದರಿಂದಾಗಿ ಮಳೆಯ ನೀರು ಸಂಪೂರ್ಣವಾಗಿ ತಂಗುದಾಣದೊಳಕ್ಕೆ ಬೀಳುತ್ತಿದ್ದು, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಈ ತಂಗುದಾಣವನ್ನು ಬಳಸಲು ಅಸಾಧ್ಯವಾಗಿದೆ. ತಕ್ಷಣವೇ ತಂಗುದಾಣದ ದುರಸ್ತಿ ಕಾರ್ಯ ನೆರವೇರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.