ಐಗೂರು, ಜು. ೧೧: ಮೂರು ಆನೆ ಮತ್ತು ಒಂದು ಮರಿಯಾನೆಯ ಹಿಂಡು ಮಾದಾಪುರ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸಿ ನಷ್ಟ ಉಂಟು ಮಾಡಿದೆ. ಮಾದಾಪುರದ ಜಂಬೂರು ಗ್ರಾಮದ ಬೆಳೆಗಾರರಾದ ಮೋಹನ ಸ್ವಾಮಿ, ನೇತ್ರಾಜು, ಮತ್ತು ಮಲ್ಲಿಕಾರ್ಜುನ ಇವರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು ಕಾಫಿ ಗಿಡ ಮತ್ತು ಬಾಳೆ ತೋಟಗಳನ್ನು ತುಳಿದು ಧ್ವಂಸಗೊಳಿಸಿವೆ. ಹರೀಶ ಎಂಬುವವರ ತೋಟದ ಕಾಫಿ, ಬಾಳೆ ಗಿಡಗಳನ್ನು ನಾಶ ಮಾಡಿದ್ದಲ್ಲದೆ ಸ್ಪಿçಂಕ್ಲರ್ ಜೆಟ್ಟುಗಳನ್ನು ತುಳಿದು ನಾಶ ಮಾಡಿವೆ. ಜಂಬೂರು ಭಾಗದಲ್ಲಿ ಆನೆಗಳು ಲಗ್ಗೆ ಇಟ್ಟ ಬಗ್ಗೆ ಈ ಭಾಗದ ನಿವಾಸಿಗಳು ಆತಂಕಗೊAಡಿದ್ದು, ಬೆಳೆಗಾರರಿಗಾದ ನಷ್ಟವನ್ನು ಭರಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಮಾದಾಪುರ ವಲಯದ ಆನೆ ಕಾರ್ಯಾಚರಣೆ ತಂಡದವರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.