ಚೆಯ್ಯಂಡಾಣೆ, ಜು. ೧೧: ವೀರಾಜಪೇಟೆಯ ಮಗ್ಗುಲ ಗ್ರಾಮದ ದಿ. ಕುಪ್ಪಚ್ಚಿರ ಭೀಮಯ್ಯ ಹಾಗೂ ಕವಿತ ದಂಪತಿಯ ಪುತ್ರ ಭರತ್ ಕೆ.ಬಿ. ಭಾರತ ಸರ್ಕಾರದ ಕೇಂದ್ರೀಯ ರೇಷ್ಮೆ ಮಂಡಳಿಗೆ ೨೦೨೪-೨೫ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ವಯ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ಇವರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ರೇಷ್ಮೆ ಕೃಷಿಯಲ್ಲಿ ಎಂ.ಎಸ್ಸಿ. (ಕೃಷಿ) ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಪ್ರಸ್ತುತ ಆಂಧ್ರಪ್ರದೇಶದ ರಾಜಮಂಡ್ರಿಯ ಐ.ಟಿ.ಸಿ. ಲಿಮಿಟೆಡ್ ಅಗ್ರಿ ಬಿಸ್ನೆಸ್ ಡಿವಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.