ನಾಪೋಕ್ಲು, ಜು. ೧೩: ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಅಂಗನವಾಡಿ ಕೇಂದ್ರ ಗಳಿಗೆ ವಿವಿಧ ಪರಿಕರಗಳನ್ನು ವಿತರಿಸಲಾಯಿತು.

ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ೧೨ ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೂಲ ಭೂತ ಸೌಲಭ್ಯಗಳಾದ ಖೌದಿ, ಕಂಬಳಿ, ಬಕೆಟ್, ಹ್ಯಾಂಡ್ ವಾಶ್, ಬ್ಲೀಚಿಂಗ್ ಪೌಡರ್, ಚಾಪೆ ಸೇರಿದಂತೆ ಇನ್ನಿತರ ಉಪಯುಕ್ತ ವಸ್ತುಗಳನ್ನು ವಿತರಿಸಲಾಯಿತು.

ಗ್ರಾ.ಪಂ. ಅಧ್ಯಕ್ಷ ಕುಶನ್ ರೈ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಉಪಾಧ್ಯಕ್ಷೆ ರೇಖಾ, ಸದಸ್ಯರಾದ ವಿಜಯಲಕ್ಷಿö್ಮ ಈರ ಸುಬ್ಬಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಪುಷ್ಪಲತಾ, ಪುಷ್ಪ ಸೋಮಣ್ಣ, ದಿವ್ಯ ನಿಂಗಪ್ಪ., ಕೃಷ್ಣಪ್ಪ, ಯಶ್ವಿನ್ ಪೊನ್ನಪ್ಪ, ರಾಜೇಶ್ ರೀತ, ಲತಾ, ಶೃತಿ, ಸುಂದರಿ, ಸೌಮ್ಯ, ಸತೀಶ್, ಮೂಡೆರ ಅಶೋಕ, ಅವರೆಮಾದಂಡ ಅನಿಲ್, ಸುಜಾತ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್., ಅಂಗನವಾಡಿ ಕಾರ್ಯಕರ್ತೆಯರಾದ ಜಯಂತಿ, ಚೈತ್ರ, ಪ್ರಮೀಳಾ, ಗೌರಿ, ಕುಸುಮ, ಭವ್ಯ, ಗೀತಾ, ಉಮಾವತಿ, ಸಮೀರಾ, ಜಯಶ್ರೀ, ಗಿರಿಜಾಬಾಯಿ, ಭವಾನಿ ಉಪಸ್ಥಿತರಿದ್ದರು.