ಮಡಿಕೇರಿ, ಜು. ೧೨: ಮಡಿಕೇರಿ ಗ್ರಾಮಾಂತರ ಠಾಣೆ ವತಿಯಿಂದ ಮೂರ್ನಾಡು ಜ್ಞಾನಜ್ಯೋತಿ ಶಾಲೆಯಲ್ಲಿ ಅರಿವು ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮ, ಸಂಚಾರಿ ನಿಯಮ, ಅಪ್ರಾಪ್ತರು ವಾಹನ ಚಲಾಯಿಸಿದರೆ ಕೈಗೊಳ್ಳುವ ಕ್ರಮ, ಬಗ್ಗೆ ಸೈಬರ್ ಸುರಕ್ಷತೆ, ಪೊಲೀಸ್ ಸೇವೆ ಹಾಗೂ ೧೧೨ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಶಾಲಾ ಸಿಬ್ಬಂದಿ, ಚಾಲಕರುಗಳಿಗೆ ಮಡಿಕೇರಿ ಗ್ರಾಮಾಂತರ ಠಾಣಾ ನಿರೀಕ್ಷಕರಾದ ಚಂದ್ರಶೇಖರ್ ಅರಿವು ಮೂಡಿಸಿದರು.