ಸುಂಟಿಕೊಪ್ಪ, ಜು. ೧೨: ಉಲುಗುಲಿ ತೋಟಕ್ಕೆ ಕಾಡಾನೆಗಳು ಧಾಳಿ ಮಾಡಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಫಸಲನ್ನು ನಾಶಗೊಳಿಸಿವೆ.

ಶುಕ್ರವಾರ ರಾತ್ರಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳು ಕಾಪಿ,ü ತೆಂಗು, ಅಡಿಕೆ, ಜೇನುಪೆಟ್ಟಿಗೆ, ಗಿಡಗಳನ್ನು ತುಳಿದು ಧ್ವಂಸ ಗೊಳಿಸಿವೆ. ತೋಟದಲ್ಲಿದ್ದ ಸಿಂಟೆಕ್ಸ್ ಟ್ಯಾಂಕನ್ನು ಕೋರೆಯಿಂದ ತಿವಿದು ಹಾನಿಗೊಳಿಸಿದೆ. ಈ ಕುರಿತು ಮಾಹಿತಿ ನೀಡಿರುವ ತೋಟದ ವ್ಯವಸ್ಥಾಪಕ ಅಬ್ಧುಲ್ ಸಲಾಂ ಕಳೆದ ಹಲವು ದಿನಗಳಿಂದ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.