ಮಡಿಕೇರಿ, ಜು. ೧೨: ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಾಂದಲಪಟ್ಟಿಯಲ್ಲಿ ದಾಖಲೆಗಳಿಲ್ಲದೆ ಜೀಪುಗಳು ಓಡಾಡುತ್ತಿವೆ; ಹೆಚ್ಚಿನ ದರ ವಿಧಿಸಿ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡಲಾಗುತ್ತಿದೆ ಎಂಬಿತ್ಯಾದಿ ದೂರುಗಳು ಬಂದ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮಾಂದಲಪಟ್ಟಿಯಲ್ಲಿ ಸಂಚರಿಸುವ ೧೧ ಜೀಪುಗಳಿಗೆ ೫೮೫೦೦ ರೂ. ಕೋರ್ಟ್ ಫೈನ್, ಐದು ಜೀಪುಗಳಿಗೆ ರೂ. ೩೫೦೦ ಸ್ಪಾಟ್ ಫೈನ್ ಹಾಗೂ ೧೦ ಜೀಪುಗಳಿಗೆ ಕೋರ್ಟ್ ನೋಟೀಸ್ ಮಾಡಲಾಗಿದೆ. ಇನ್ನು ಮುಂದೆ ಪ್ರವಾಸಿಗರಿಗೆ ಕಿರಿಕಿರಿ ಮಾಡಿದರೆ ಹಾಗೂ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದ ದೂರುಗಳು ಬಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.