*ಗೋಣಿಕೊಪ್ಪ, ಜು. ೧೩: ಗೋಣಿಕೊಪ್ಪ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆ ಬ್ಯಾಗ್‌ಗಳನ್ನು ಲಿಯಾರ ಗೋಲ್ಡ್ ಸಂಸ್ಥೆ ವಿತರಿಸಿತು. ಶಾಲೆಯ ಪ್ರಾರ್ಥನಾ ಸಂದರ್ಭದಲ್ಲಿ ಸುಮಾರು ೫೦ ಬ್ಯಾಗುಗಳನ್ನು ವಿತರಿಸಿದರು. ಸಂಸ್ಥೆಯ ವ್ಯವಸ್ಥಾಪಕ ಮ್ಯಾಥ್ಯು ಮತ್ತು ದೇವಮ್ಮಾಜಿ, ಸಿಬ್ಬಂದಿಗಳು, ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್, ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.