ಐಗೂರು, ಜು. ೧೨: ಯಡವನಾಡಿನ ವಾಲ್ಮೀಕಿ ಆಶ್ರಮ ಶಾಲೆಯ ಆವರಣದಲ್ಲಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ವೆಟರ್ಗಳನ್ನು ವಿತರಿಸಲಾಯಿತು.
ಆಶ್ರಮ ಶಾಲೆಯ ೧೭೦ ವಿದ್ಯಾರ್ಥಿಗಳಿಗೆ ಮತ್ತು ಯಡವನಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨೦ ವಿದ್ಯಾರ್ಥಿಗಳಿಗೆ ಸ್ವೆಟರ್ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ರಜನಿಕಾಂತ್, ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಎ. ಪ್ರಭಾಕರ, ಟಿ.ಆರ್. ವಿಜಯಕುಮಾರ್, ಗ್ರಾ.ಪಂ. ಸದಸ್ಯ ಬಾರನ ಪ್ರಮೋದ್, ಜೋಯಪ್ಪ, ಗೌರಮ್ಮ, ಗ್ರಾಮಸ್ಥ, ಯಡವನಾಡು ರಮೇಶ, ಸುನಿಲ್, ಸಂದೇಶ್, ವರದರಾಜು, ಮೋಹನ್, ನವೀನ್, ರವಿ ಮತ್ತು ಟಿ.ಕೆ. ಭಾಸ್ಕರ ಉಪಸ್ಥಿತರಿದ್ದರು.