ಶ್ರೀಮAಗಲ, ಜು. ೧೩: ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮದಲ್ಲಿ ಮೇಯಲು ಕಟ್ಟಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆಸಿದ್ದು ಒಂದು ಹಸುವನ್ನು ಕೊಂದುಹಾಕಿದೆ. ಮತ್ತೆರಡು ಹಸುಗಳು ಗಂಭೀರವಾಗಿ ಗಾಯಗೊಂಡಿವೆ.

ತಾ. ೧೨ರ ಸಂಜೆ ಘಟನೆ ನಡೆದಿದ್ದು, ಸಂಜೆ ಹಸುವನ್ನು ಕೊಟ್ಟಿಗೆಗೆ ಸೇರಿಸಲು ತೆರಳಿದ ವೇಳೆ ಘಟನೆ ತಿಳಿದುಬಂದಿದೆ. ಗ್ರಾಮದ ರೈತ ಕುಂಞಪAಡ ರಾಜೇಶ್ ಅವರಿಗೆ ಸೇರಿದ ಹಸುಗಳ ಹುಲಿ ಮೇಲೆ ದಾಳಿ ನಡೆಸಿದ್ದು, ರೈತ ರಾಜೇಶ್ ಕುಟುಂಬ ಇದರಿಂದ ನೊಂದಿದ್ದು, ಹುಲಿ ಗ್ರಾಮದಲ್ಲಿಯೇ ಇರುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಮಿತಿಮೀರಿದ್ದು, ಜಾನುವಾರುಗಳು ನಿರಂತರವಾಗಿ ದಾಳಿಗೆ ಬಲಿಯಾಗುತ್ತಿವೆ. ಭಕ್ಷಕ ಹುಲಿ ಸೆರೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.