ಮಡಿಕೇರಿ, ಜು. ೧೨: ಅತಿಸಾರ ಭೇದಿ ತಡೆಗಟ್ಟುವಿಕೆ ಮತ್ತು ಎ ವಿಟಮಿನ್ ಪೂರಕ ಕಾರ್ಯಕ್ರಮ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಡಿ.ಪಿ.ಸಿ. ಮಲ್ಲೇಶ್, ಭೂಮಿಕಾ ಅವರ ಸಮ್ಮುಖದಲ್ಲಿ ನಡೆಯಿತು.
೧ ವರ್ಷ ೩ ತಿಂಗಳಿAದ ೫ ವರ್ಷದ ಎಲ್ಲಾ ಮಕ್ಕಳಿಗೂ ಎ ವಿಟಮಿನ್ ನೀಡಲಾಯಿತು. ಅತಿಸಾರ ಭೇದಿ ತಡೆಗಟ್ಟುವಿಕೆ ಬಗ್ಗೆ ರೀಟಾ ಅವರು ಮಾಹಿತಿ ನೀಡಿದರು. ಸಭೆಯಲ್ಲಿ ಚೈತ್ರ, ಪ್ರಮೀಳ, ಸುನಿತ, ಜ್ಯೋತಿ ಮತ್ತು ತಾಯಂದಿರು ಹಾಜರಿದ್ದರು.