ಗೋಣಿಕೊಪ್ಪ ವರದಿ, ಜು. ೧೩: ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಸಂಸತ್ ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಶಾಲಾ ನಾಯಕನಾಗಿ ಅಂಜಪರವAಡ ಎಸ್. ದೇವಯ್ಯ, ನಾಯಕಿಯಾಗಿ ಕುಟ್ಟಂಡ ಎಸ್. ಲೀಶಾ ನಾಯಕತ್ವವನ್ನು ಸ್ವೀಕರಿಸಿದರು. ಕ್ರೀಡಾ ನಾಯಕನಾಗಿ ಕಿರಿಯಮಾಡ ಜಿ. ಉತ್ತಪ್ಪ, ಉಪ ಕ್ರೀಡಾ ನಾಯಕಿಯಾಗಿ ಟಿ.ಎಸ್. ನೇಹಾಲ್, ಶಿಸ್ತು ಕಾರ್ಯದರ್ಶಿ ಅರಮಣಮಾಡ ಅಂಶಿಕ, ಉಪ ಶಿಸ್ತು ಕಾರ್ಯದರ್ಶಿಯಾಗಿ ಎಂ.ಆರ್. ರಮೀಜ್, ಸಾಂಸ್ಕೃತಿಕ ನಾಯಕನಾಗಿ ಅಪ್ಪನೆರವಂಡ ತೇಜಸ್ ಮೊಣ್ಣಪ್ಪ, ಉಪ ಸಾಂಸ್ಕೃತಿಕ ನಾಯಕ ಬಿ.ಎ. ಆದಿಲ್ ಪದಗ್ರಹಣ ಸ್ವೀಕರಿಸಿದರು.

ಅಕ್ವಿಲಾ ತಂಡದ ನಾಯಕನಾಗಿ ಎಸ್. ಸುದರ್ಶನ್, ಉಪನಾಯಕಿ ಯಾಗಿ ಎಂ.ಎA. ಭೂಮಿಕ, ನಾಕ್ಟ ತಂಡದ ನಾಯಕ ಎಂ.ಎಸ್. ಮಹಮದ್ ಸಾಜಿದ್, ಉಪನಾಯಕ ಎ.ಎಸ್. ಪ್ರಶೋಭ್, ಪೆಗಾಸಿಸ್ ತಂಡದ ನಾಯಕಿಯಾಗಿ ಸಾರ ಮರಿಯಾ ಸಾಲೋಮನ್, ಉಪನಾಯಕಿಯಾಗಿ ಎಂ.ಎ. ಸನಾ, ಫೀನಿಕ್ಸ್ ತಂಡದ ನಾಯಕಿಯಾಗಿ ಕೆ.ಪಿ. ಲವಿತಾ, ಉಪನಾಯಕಿಯಾಗಿ ಬಿ.ಎಸ್. ತನಿಷ್ಕ ಪ್ರಮಾಣವಚನ ಸ್ವೀಕರಿಸಿದರು.

ಹಿರಿಯ ಡಾ. ಅಜ್ಜಿಕುಟ್ಟಿರ ಪೂವಮ್ಮ ಭಾಗವಹಿಸಿದ್ದರು. ಶಾಲೆಯ ಸಂಸ್ಥಾಪಕಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಪ್ರಾಂಶುಪಾಲ ಕೂತಂಡ ಪುಷ್ಪ ಸುಬ್ಬಯ್ಯ ಭಾಗವಹಿಸಿ ಸಲಹೆ ನೀಡಿದರು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣದ ಬಗ್ಗೆ ತಿಳಿಸಲಾಯಿತು. ವಿದ್ಯಾರ್ಥಿನಿ ಕೆ. ರಕ್ಷಾ, ನಿರೂಪಿಸಿದರು. ಮನೀಷ ಸ್ವಾಗತಿಸಿದರು. ಚೀರಂಡ ಅನ್ವಿತಾ ಚೋಂದಮ್ಮ ವಂದಿಸಿದರು.