ಮಡಿಕೇರಿ, ಜು. ೧೩: ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಹಾಗೂ ಧಾರವಾಡ ಜಿಲ್ಲಾ ಕಿವುಡರ ಸಂಘದ ಸಹಯೋಗದಲ್ಲಿ ನಡೆದ ೨೦ನೇ ಕರ್ನಾಟಕ ರಾಜ್ಯ ಕಿವುಡರ ಚೆಸ್ ಚಾಂಪಿಯನ್ ಶಿಪ್ನಲ್ಲಿ ಕೊಡಗಿನ ಪದಾಧಿಕಾರಿ ಗಳು ಭಾಗವಹಿಸಿದ್ದರು. ಹುಬ್ಬಳ್ಳಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ತಾ. ೩ ರಿಂದ ೫ ರ ವರೆಗೆ ನಡೆದ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘದ ಉಪಾಧ್ಯಕ್ಷ ಶಂಕರನಾರಾಯಣ ಹೆಬ್ಬಾರ್ ಹಾಗೂ ಕಾರ್ಯದರ್ಶಿ ರಂಜಿತ್ ಪಾಲ್ಗೊಂಡಿದ್ದರು.