ವೀರಾಜಪೇಟೆ, ಜು. ೧೩: ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ವೀರಾಜಪೇಟೆ ನ್ಯಾಯಾಲಯಗಳ ಸಮುಚ್ಚಯದಲ್ಲಿ ಮೆಗಾ ಲೋಕ ಅದಾಲತ್ ನಡೆಯಿತು.
ಅದಾಲತ್ನಲ್ಲಿ ಮೋಟಾರ್ ವಾಹನ ಅಪಘಾತ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಎಂ.ಎA.ಡಿ. ಆರ್. ಪ್ರಕರಣಗಳು, ಪಾಲು ವಿಭಾಗ ದಾವೆಗೆ ಸಂಬAಧಿಸಿದ ಸಿವಿಲ್ ಪ್ರಕರಣಗಳು ಸೇರಿದಂತೆ ಒಟ್ಟು ೨೮೧೫ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಆಯ್ದುಕೊಳ್ಳಲಾಗಿತ್ತು.
ಇದರಲ್ಲಿ ಚೆಕ್ ಬೌನ್ಸ್ ಪ್ರಕರಣಗಳು ಒಟ್ಟು ೪೮೫ ಪ್ರಕರಣದಲ್ಲಿ ೬೩ ಪ್ರಕರಣಗಳು ಇತ್ಯರ್ಥಗೊಂಡವು ಮತ್ತು ಸಿವಿಲ್ ದಾವೆ ಪ್ರಕರಣಗಳು ೪೭೭ ರಲ್ಲಿ ೫೭ ಪ್ರಕರಣ ಮತ್ತು ಇತರೆ ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ. ಪೂರ್ವ ಧಾವೆ ಬ್ಯಾಂಕಿAಗ್ ಪ್ರಕರಣಗಳಲ್ಲಿ ಒಟ್ಟು ೧೭೬೪ ಇತ್ಯರ್ಥಗೊಂಡು ಒಟ್ಟಾರೆಯಾಗಿ ಅಂದಾಜು ಹಣದ ಮೊತ್ತ ರೂ. ೧೧,೪೦,೨೧,೯೨೯ ಇತ್ಯರ್ಥಗೊಂಡಿದೆ.
ಮೆಗಾ ಲೋಕ ಅದಾಲತ್ನಲ್ಲಿ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ನಟರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರದೀಪ್ ಪೊತೆದಾರ್, ವಕೀಲರ ಸಂಧಾನಕಾರರಾಗಿ ಎಂ.ಎA. ನಂಜಪ್ಪ, ಕೆ.ಎನ್. ವಿಶ್ವನಾಥ್ ಸಿ.ಕೆ. ಪೂವಣ್ಣ ಅವರುಗಳು ಭಾಗವಹಿಸಿದ್ದರು.