ಮಡಿಕೇರಿ, ಜು. ೧೩: ಕನ್ನಂಡ ಬಾಣೆ ಪೈಸಾರಿಗೆ ಹೋಗುವ ರಸ್ತೆಯ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದ ಕೂಡಲೇ ಸ್ಪಂದಿಸಿದ ಶಾಸಕ ಡಾ. ಮಂತರ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಈಚೆಗೆ ನಿಧನರಾದ ಸ್ಥಳೀಯ ನಿವಾಸಿ ಧರ್ಮ ಅವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬ ಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಮಡಿಕೇರಿ ನಗರಸಭೆ ಆಯುಕ್ತ ರಮೇಶ್, ಇಂಜಿನಿಯರ್, ಡಿಎಫ್‌ಓ, ಮೂಡ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮೂಡ ಸದಸ್ಯರಾದ ಚಂದ್ರಶೇಖರ್ ಆರ್.ಪಿ, ಮಿನಾಜ್ ಪ್ರವೀಣ್, ನಗರಸಭಾ ಸದಸ್ಯ ಕೆ.ಎಸ್. ರಮೇಶ್, ಜೆ.ಸಿ. ಜಗದೀಶ್, ಸದಾ ಮುದ್ದಪ್ಪ, ಮುದ್ದುರಾಜ್, ಕವನ್ ಕೊತ್ತೋಳಿ, ಕೆ.ಜಿ. ಪೀಟರ್, ರಿಯಾಜ್ ಅಹಮದ್ ಸ್ಥಳೀಯ ನಿವಾಸಿಗಳು ಹಾಜರಿದ್ದರು.